ಕರ್ನಾಟಕ

karnataka

ETV Bharat / state

ಅಂಬಿ ಜನ್ಮದಿನದ ಅಂಗವಾಗಿ ಆಹಾರದ ಕಿಟ್, ವೆಂಟಿಲೇಟರ್ ವಿತರಣೆ ಮಾಡಿದ ಸುಮಲತಾ ಅಂಬರೀಶ್ - Ambarish Birthday celebration

ಅಂಬರೀಶ್​ ಹುಟ್ಟು ಹಬ್ಬದ ಅಂಗವಾಗಿ ಸಂಸದೆ ಸುಮಲತಾ ಅಂಬರೀಶ್ 300 ಮಂದಿ ವಿಕಲಚೇತನರಿಗೆ ಆಹಾರದ ಕಿಟ್ ಹಾಗೂ ಮೆಡಿಕಲ್ ಕಾಲೇಜಿಗೆ ಅವಶ್ಯಕವಾಗಿ ಬೇಕಾದ ವೆಂಟಿಲೇಟರ್​​ಗಳನ್ನು ವಿತರಣೆ ಮಾಡಿದರು.

Ambarish Birthday celebration, ಅಂಬರೀಶ್​ ಹುಟ್ಟುಹಬ್ಬ ಸಂಭ್ರಮ
ಅಂಬಿ ಜನ್ಮದಿನದ ಅಂಗವಾಗಿ ಆಹಾರದ ಕಿಟ್, ವೆಂಟಿಲೇಟರ್​​ಗಳನ್ನು ವಿತರಣೆ ಮಾಡಿದ ಸುಮಲತಾ ಅಂಬರೀಶ್

By

Published : May 30, 2020, 4:13 PM IST

ಮಂಡ್ಯ: ಮಂಡ್ಯದ ಗಂಡು ಎಂದೇ ಬಿರುದಾಂಕಿತರಾಗಿದ್ದ ಅಂಬರೀಶ್​ ಹುಟ್ಟು ಹಬ್ಬವನ್ನು ಅಂಬಿ ಪತ್ನಿ, ಸಂಸದೆ ಸುಮಲತಾ ಅಂಬರೀಶ್ ಸಾಮಾಜಿಕ ಕಾರ್ಯಗಳ ಮೂಲಕ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು.

ಸಾಮಾಜಿಕ ಕಾರ್ಯಗಳ ಮೂಲಕ ಅಂಬಿ ಹುಟ್ಟುಹಬ್ಬ ಆಚರಣೆ

ಮದ್ದೂರು, ಮಳವಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಿರ್ಗತಿಕರಿಗೆ ಆಹಾರದ ಕಿಟ್ ವಿತರಣೆ ಮಾಡುವ ಮೂಲಕ ಸುಮಲತಾ ಅಂಬರೀಶ್ ಅಂಬಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು. ನಂತರ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್​ಗೆ ಅಭಿನಂದನೆ ಸಲ್ಲಿಸಿ ಅರ್ಥಪೂರ್ಣವಾಗಿ ಅಂಬಿ ಜನ್ಮದಿನವನ್ನು ಆಚರಿಸಲಾಯಿತು.

ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 300 ಮಂದಿ ವಿಕಲಚೇತನರಿಗೆ ಆಹಾರದ ಕಿಟ್ ಹಾಗೂ ಮೆಡಿಕಲ್ ಕಾಲೇಜಿಗೆ ಅವಶ್ಯಕವಾಗಿ ಬೇಕಾದ ವೆಂಟಿಲೇಟರ್​​ಗಳನ್ನು ವಿತರಣೆ ಮಾಡಿ ಅಂಬರೀಶ್ ಗುಣಗಾನ ಮಾಡಿದರು. ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಅಂಬಿ ಅಭಿಮಾನಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಕೆಲವು ಕಡೆ ಅಭಿಮಾನಿಗಳು ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿದರು.

ABOUT THE AUTHOR

...view details