ಕರ್ನಾಟಕ

karnataka

ETV Bharat / state

ಇಡೀ ದೇಶದ ಗಮನ ಸೆಳೆದಿದ್ದ ಮಂಡ್ಯದಲ್ಲಿ ಸುಮಲತಾಗೆ ಜಯ! - undefined

ಹೈ ವೋಲ್ಟೇಜ್‌ ಕ್ಷೇತ್ರವಾಗಿ ಇಡೀ ದೇಶದ ಗಮನ ಸೆಳೆದಿದ್ದ ಸಕ್ಕರೆ ನಾಡಿನಲ್ಲಿ ರೆಬಲ್‌ ಸ್ಟಾರ್‌ ಅಂಬರೀಶ್‌ ಪತ್ನಿ ಸುಮಲತಾ ಜಯಭೇರಿ ಬಾರಿಸಿದ್ದಾರೆ. ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್‌ ಎದುರಿನ ಜಿದ್ದಾಜಿದ್ದಿನ ಪ್ರಬಲ ಪೈಪೋಟಿಯ ಮಧ್ಯೆ ಮಂಡ್ಯದ ಮಂದಿ ಸುಮಲತಾ ಅವರಿಗೆ ಮಣೆ ಹಾಕಿದ್ದಾರೆ. ಈ ಮೂಲಕ ಸಕ್ಕರೆ ನಾಡಿನಲ್ಲಿ ಸುಮಲತಾ ಸ್ವಾಭಿಮಾನದ ಕಹಳೆ ಊದಿದ್ದಾರೆ.

ಇಂಡಿಯಾ ಗಮನ ಸೆಳೆದ ಮಂಡ್ಯದಲ್ಲಿ ಸುಮಲತಾಗೆ ಗೆಲುವು

By

Published : May 23, 2019, 5:14 PM IST

Updated : May 23, 2019, 5:28 PM IST

ಮಂಡ್ಯ ಲೋಕಸಭಾ ಕ್ಷೇತ್ರ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ರೋಚಕವಾಗಿತ್ತು. ಈ ಕದನ ಕಣದ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಸಕ್ಕರೆ ನಾಡಿನಲ್ಲಿ ಸುಮಲತಾ ಪ್ರಚಂಡ ವಿಜಯ ದಾಖಲಿಸಿದ್ದಾರೆ.

ಮಂಡ್ಯದಲ್ಲಿ ಗೆಲುವಿನ ಕಹಳೆ ಊದಿದ ಪಕ್ಷೇತರ ಅಭ್ಯರ್ಥಿ ಸುಮಲತಾ

ಮಂಡ್ಯವನ್ನು ಈ ಬಾರಿ ಇಡೀ ದೇಶದ ಜನತೆ ಕಣ್ಣರಳಿಸಿ ನೋಡೋಕೆ ಕಾರಣಗಳಿವೆ. ಕಾಂಗ್ರೆಸ್‌-ಜೆಡಿಎಸ್‌ನ ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಪುತ್ರ ನಿಖಿಲ್‌ ಹಾಗೂ ಸುಮಲತಾ ಅಂಬರೀಶ್‌ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರು. ಇದಕ್ಕೂ ಮುನ್ನ ಹಸ್ತದ ಗುರುತಿನಡಿ ಸ್ಪರ್ಧೆಗೆ ಒಲವು ತೋರಿದ್ದ ಸುಮಲತಾಗೆ ಕಾಂಗ್ರೆಸ್‌ ನಾಯಕರು ಕೈ ಕೊಟ್ಟಿದ್ದರು. ಆದ್ರೆ, ಮಂಡ್ಯದಲ್ಲೇ ಚುನಾವಣೆ ನಿಂತು ತಾನೇನು ಎಂದು ತೋರಿಸುವ ಛಲದಿಂದ ಹೋರಾಡಿದ ಈ ಧೀರೆ, ಕಾರ್ಯಕರ್ತರ ಬೆಂಬಲದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಸುಮಲತಾ ಪರ ಯಶ್‌, ದರ್ಶನ್‌ ಪ್ರಚಾರ

ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಗೆಲ್ಲಿಸುವ ಮೂಲಕ ದಿವಂಗತ ಅಂಬರೀಶ್‌ ಅವರ ಋಣ ತೀರಿಸಬೇಕು ಎಂದು ಜೋಡೆತ್ತುಗಳೆಂದೇ ಕರೆಸಲ್ಪಟ್ಟ ಸ್ಯಾಂಡಲ್​ವುಡ್‌ ತಾರೆಯರಾದ ದರ್ಶನ್ ಮತ್ತು ಯಶ್‌, ಪ್ರಚಾರದ ಅಖಾಡಕ್ಕೆ ಇಳಿದಿದ್ದರು. ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿದ ಈ ತಾರೆಯರು, ಜನಸಾಮಾನ್ಯರ ಕಷ್ಟ ಸುಖಗಳನ್ನು ಆಲಿಸೋ ಮೂಲಕ ಮತಯಾಚನೆ ಮಾಡಿದ್ರು. ರಾಕ್‌ಲೈನ್‌ ವೆಂಕಟೇಶ್‌, ದೊಡ್ಡಣ್ಣ ಸೇರಿದಂತೆ ಇತರ ಸಿನಿಮಾ ನಟರೂ ಇವರಿಗೆ ಸಾಥ್‌ ಕೊಟ್ಟಿದ್ದರು. ಜೊತೆಗೆ ಕಾಂಗ್ರೆಸ್‌ನ ಕೆಲ ಮುಖಂಡರು ಸುಮಲತಾ ಪರ ಮತಯಾಚನೆ ಮಾಡಿ ಮೈತ್ರಿ ನಾಯಕರಿಗೆ ಸೆಡ್ಡು ಹೊಡೆದು ಬಹಿರಂಗವಾಗಿಯೇ ಪ್ರಚಾರ ಮಾಡಿದ್ದರು.

ಗೆಲುವಿನ ಮೂಲಕ ಸುಮಲತಾ ದಾಖಲೆ!

ಸುಮಲತಾ ಅಂಬರೀಶ್‌, ಪಕ್ಷೇತರರಾಗಿ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಪಡೆದ ಮೊದಲ ಮಹಿಳೆ ಎಂಬ ದಾಖಲೆಯನ್ನೂ ಸಹ ಬರೆದಿದ್ದಾರೆ. ಸುಮಲತಾ ಪತಿ ಅಂಬರೀಶ್‌, ನಟನೆಯಲ್ಲಿ ಮಾತ್ರವಲ್ಲದೆ ರಾಜಕೀಯದಲ್ಲೂ ಸಾಕಷ್ಟು ಹೆಸರು ಮಾಡಿದ್ದರು. ಆದ್ರೆ ಸುಮಲತಾಗೆ ಯಾವುದೇ ರಾಜಕೀಯ ಅನುಭವ ಇರಲಿಲ್ಲ. ಪತಿಯ ನಿಧನದ ನಂತ್ರ ಮಂಡ್ಯ ಜನತೆಯ ಸೇವೆ ಮಾಡಬೇಕು ಅಂತ ಲೋಕ ಸಮರಕ್ಕೆ ಧುಮುಕಿದ ಅವರು, ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಕೈಗೊಂಡರು. ಇದೇ ಸಂದರ್ಭದಲ್ಲಿ ಸುಮಾ ಅನೇಕ ಟೀಕೆ, ಆರೋಪಗಳನ್ನು ಎದುರಿಸಬೇಕಾಯ್ತು. ಒಟ್ಟಿನಲ್ಲಿ ಕಠಿಣ ಸನ್ನಿವೇಶಗಳಲ್ಲೂ ರಾಜಕೀಯ ಪ್ರಬುದ್ಧತೆಯನ್ನು ಪ್ರದರ್ಶಿಸಿದ ಸುಮಲತಾ ಯಾವುದೇ ಹೇಳಿಕೆಗಳಿಗೆ ಪ್ರತ್ಯುತ್ತರ ನೀಡದೆ ಮೌನ ವಹಿಸಿದ್ದರು. ಇದೀಗ ಬಹಿರಂಗವಾಗಿರೋ ಫಲಿತಾಂಶ ಎಲ್ಲದಕ್ಕೂ ಉತ್ತರ ನೀಡಿದೆ.

Last Updated : May 23, 2019, 5:28 PM IST

For All Latest Updates

TAGGED:

ABOUT THE AUTHOR

...view details