ಕರ್ನಾಟಕ

karnataka

ETV Bharat / state

'ಅವರು ಜೈಶ್ರೀರಾಮ್‌ ಎಂದು ಕೂಗಿದ್ರು, ನಾನು ಅಲ್ಲಾಹು ಅಕ್ಬರ್‌ ಎಂದು ಕೂಗಿದೆ, ಅವರದ್ದೂ ತಪ್ಪಿಲ್ಲ, ನನ್ನದೂ ತಪ್ಪಿಲ್ಲ' - ರಾಜ್ಯದಲ್ಲಿ ಹಿಜಾಬ್​ ವಿವಾದ

ಮಂಡ್ಯದ ಪಿಇಎಸ್​ ಕಾಲೇಜಿನ ಬಳಿ ಅಲ್ಲಾಹು ಅಕ್ಬರ್ ಎಂದು ಕೂಗಿದ ವಿದ್ಯಾರ್ಥಿನಿ ಮುಸ್ಕಾನ್ ಪ್ರತಿಕ್ರಿಯೆ ನೀಡಿದ್ದು, 'ಅವರು ಜೈ ಶ್ರೀರಾಮ್ ಎಂದು ಕೂಗಿದರು. ನಾನು ಅಲ್ಲಾಹು ಅಕ್ಬರ್ ಎಂದು ಕೂಗಿದೆ' ಎಂದು ಸ್ಪಷ್ಟನೆ ನೀಡಿದ್ದಾರೆ.

student-muskan-on-allahu-akbar-slogan
ಅವರು ಕೂಗಿದ್ದು ತಪ್ಪಿಲ್ಲ, ನಾನು ಕೂಗಿದ್ದೂ ತಪ್ಪಿಲ್ಲ: ಅಲ್ಲಾಹು ಅಕ್ಬರ್ ಘೋಷಣೆ ಹೋಗಿದ್ದ ವಿದ್ಯಾರ್ಥಿನಿ ಸ್ಪಷ್ಟನೆ

By

Published : Feb 9, 2022, 12:38 PM IST

Updated : Feb 9, 2022, 12:45 PM IST

ಮಂಡ್ಯ: ಹಿಜಾಬ್ ವಿವಾದ ದಿನದಿಂದ ದಿನಕ್ಕೆ ಬೇರೆ ಬೇರೆ ಮಗ್ಗುಲುಗಳಿಗೆ ಹೊರಳಿಕೊಳ್ಳುತ್ತಿದೆ. ಮಂಗಳವಾರ ಮಂಡ್ಯದ ಪಿಇಎಸ್​ ಕಾಲೇಜಿನ ಬಳಿ 'ಅಲ್ಲಾಹು ಅಕ್ಬರ್' ಎಂದು ಕೂಗಿದ ವಿದ್ಯಾರ್ಥಿನಿ ಮುಸ್ಕಾನ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

'ನಾನು ಅಸೈನ್ಮೆಂಟ್‌ ಕೊಡಲು ಕಾಲೇಜಿಗೆ ಹೋಗಿದ್ದೆ. ಈ ವೇಳೆ ಬುರ್ಕಾ ತೆಗೆದುಕೊಂಡು ಹೋಗು ಎಂದು ಹುಡುಗರು ಹೇಳಿದರು. ಗುಂಪು ಕಟ್ಟಿಕೊಂಡು ಘೋಷಣೆಗಳನ್ನು ಕೂಗುತ್ತಿದ್ದರು. ಇದೇ ರೀತಿ ನನ್ನ ಸ್ನೇಹಿತೆಯರಿಗೂ ತಡೆದಿದ್ದರು. ಅವರು ಜೈ ಶ್ರೀರಾಮ್ ಎಂದು ಕೂಗಿದರು. ನಾನು ಅಲ್ಲಾಹು ಅಕ್ಬರ್' ಎಂದು ಕೂಗಿದೆ' ಎಂದು ಸ್ಪಷ್ಟನೆ ನೀಡಿದರು.

ವಿದ್ಯಾರ್ಥಿನಿ ಮುಸ್ಕಾನ್ ಪ್ರತಿಕ್ರಿಯೆ

'ಅವರು ಕೂಗಿದ್ದು ತಪ್ಪಿಲ್ಲ, ನಾನು ಕೂಗಿದ್ದೂ ತಪ್ಪಿಲ್ಲ. ನಾನು ನನ್ನ ಧರ್ಮ ಪಾಲನೆ ಮಾಡಿದ್ದೇನೆ. ಅವರು ಕಿವಿ ಹತ್ತಿರ ಬಂದು ಘೋಷಣೆ ಕೂಗಿದ್ರು. ಆ ಕ್ಷಣದಲ್ಲಿ ನನಗೆ ಯಾವ ಭಯವೂ ಆಗಲಿಲ್ಲ. ನಾನು ಯಾಕೆ ಭಯ ಪಡಬೇಕು?' ಎಂದರು.

ಇದೇ ವೇಳೆ, ಕೋರ್ಟ್ ಆದೇಶ ಏನು ಬರುತ್ತೋ ಗೊತ್ತಿಲ್ಲ. ಆದರೆ ಹಿಜಬ್‌ ವಿಚಾರದಲ್ಲಿ ಆದೇಶ ಪಾಲನೆ ಕಷ್ಟ' ಎಂದು ಹೇಳಿದರು.

ಇದನ್ನೂ ಓದಿ:'ನಾನು ಹಿಜಾಬ್ ಹಾಕಲ್ಲ‌, ಅದು ಅವರವರ ಸ್ವಾತಂತ್ರ್ಯ': ಸರಿಗಮಪ ಖ್ಯಾತಿಯ ಗಾಯಕಿ ಸುಹಾನ ಸೈಯದ್

Last Updated : Feb 9, 2022, 12:45 PM IST

ABOUT THE AUTHOR

...view details