ಮಂಡ್ಯ: ಮೈಸೂರಿನ ವಿದ್ಯಾರ್ಥಿಯೊಬ್ಬ ಕಾವೇರಿ ನದಿಗೆ ಹಾರಿದ್ದು, ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ಘಟನೆ ಜರುಗಿದೆ. ಆತನ ಸುಳಿವು ಪತ್ತೆಯಾಗಿಲ್ಲ. ಕೆಆರ್‌ಎಸ್ ಜಲಾಶಯ ನೋಡಲು ಬಂದಿದ್ದಾಗ ದುರಂತ ನಡೆದಿದೆ.
ಕೆಆರ್‌ಎಸ್ ಬಳಿ ಕಾವೇರಿ ನದಿಗೆ ಹಾರಿದ ಮೈಸೂರಿನ ವಿದ್ಯಾರ್ಥಿ - student jumped into kaveri river
ಮಂಡ್ಯ ಜಿಲ್ಲೆಯಲ್ಲಿನ ಕೆಆರ್‌ಎಸ್ ಜಲಾಶಯ ನೋಡಲು ಬಂದಿದ್ದ ಮೈಸೂರಿನ ವಿದ್ಯಾರ್ಥಿಯೊಬ್ಬ ಕಾವೇರಿ ನದಿಗೆ ಹಾರಿದ್ದಾನೆ.
ಸೃಜನ್-ಕಾವೇರಿ ನದಿಗೆ ಹಾರಿದ ವಿದ್ಯಾರ್ಥಿ
ಮೈಸೂರಿನ ಪಡುವಾರಹಳ್ಳಿಯ ಸೃಜನ್ (20) ನದಿಗೆ ಹಾರಿದ ವಿದ್ಯಾರ್ಥಿ. ಈತ ತನ್ನ ಸ್ನೇಹಿತರೊಂದಿಗೆ ಕೆಆರ್‌ಎಸ್ ಜಲಾಶಯ ಮತ್ತು ಕಾವೇರಿ ನದಿ ನೋಡಲು ಬಂದಿದ್ದನಂತೆ. ಕೆಆರ್‌ಎಸ್ ಗೇಟ್‌ನಿಂದ ಸುಮಾರು 150 ಮೀ.ದೂರದಲ್ಲಿ ನಿಂತು ನೋಡುತ್ತಿದ್ದಾಗ ಏಕಾಏಕಿ ನದಿಗೆ ಧುಮುಕಿದ್ದಾನೆ. ಭೋರ್ಗರೆಯುತ್ತಿರುವ ನದಿಯ ಹರಿವಿನ ರಭಸಕ್ಕೆ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ ಎನ್ನಲಾಗ್ತಿದೆ.
ಸ್ನೇಹಿತರು ಆತನ ಮನೆಯವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸೃಜನ್‌ಗಾಗಿ ಶೋಧ ಕಾರ್ಯ ನಡೆಯಲಿದೆ. ಕೆಆರ್‌ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.