ಕರ್ನಾಟಕ

karnataka

ETV Bharat / state

ಕೆನರಾ ಬ್ಯಾಂಕ್ ಎಟಿಎಂನಲ್ಲಿ ಅಪರಿಚಿತ ವ್ಯಕ್ತಿಯಿಂದ ಮಹಿಳೆಗೆ ₹50 ಸಾವಿರ ವಂಚನೆ - ಬ್ಯಾಂಕಿಗೆ ಹಣ ಜಮಾವಣೆ ಮಾಡುವುದಾಗಿ ಮೋಸ

ಇಷ್ಟಾದರೂ ಖಾತೆಗೆ ಹಣ ಜಮೆ ಆಗದ ಹಿನ್ನೆಲೆ, ಪರಿಶೀಲನೆ ನಡೆಸಿದಾಗ ಮಹಿಳೆಯು ವಂಚನೆಗೊಳಗಾಗಿರುವ ಸಂಗತಿ ತಿಳಿದು ಬಂದಿದೆ. ಮಹಿಳೆಗೆ ಅಪರಿಚಿತ ವ್ಯಕ್ತಿ ವಂಚಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಅಪರಿಚಿತ ವ್ಯಕ್ತಿ ಪತ್ತೆಗೆ ಮುಂದಾಗಿದ್ದಾರೆ..

ಕೆನರಾ ಬ್ಯಾಂಕ್ ಎಟಿಎಂನಲ್ಲಿ ಅಪರಿಚಿತ ವ್ಯಕ್ತಿಯಿಂದ ಮಹಿಳೆಗೆ ವಂಚನೆ

By

Published : Feb 12, 2022, 4:35 PM IST

ಮಂಡ್ಯ: ಅಪರಿಚಿತ ವ್ಯಕ್ತಿಯೋರ್ವ ಮಹಿಳೆಗೆ ವಂಚಿಸಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಕೆನರಾ ಬ್ಯಾಂಕ್ ಎಟಿಎಂ ಬಳಿ ನಡೆದಿದೆ.

ಚನ್ನಪಟ್ಟಣ ತಾಲೂಕಿನ ಕೋಲೂರು ಗ್ರಾಮದ ಮಮತ ಎಂಬುವರು ವಂಚನೆಗೆ ಒಳಗಾದ ಮಹಿಳೆ. ಮಗನ ವಿದ್ಯಾಭ್ಯಾಸಕ್ಕಾಗಿ ಒಡವೆಗಳನ್ನು ಅಡವಿಟ್ಟು ತಂದಿದ್ದ50 ಸಾವಿರ ರೂ. ವಂಚಿಸಿ ಅಪರಿಚಿತ ವ್ಯಕ್ತಿ ಪರಾರಿಯಾಗಿದ್ದಾನೆ.

ಬ್ಯಾಂಕಿನಲ್ಲಿ ಡೆಪಾಸಿಟ್‌ಗಾಗಿ ಹೆಚ್ಚು ಜನರಿರೋದನ್ನು ಕಂಡು ಡೆಪಾಸಿಟ್ ಮೆಷಿನ್‌ನಲ್ಲಿ ಜಮಾ ಮಾಡಿ ಕೊಡುತ್ತೇನೆ ಎಂದು ಹೇಳಿದ್ದ ಅಪರಿಚಿತ ₹50 ಸಾವಿರವನ್ನು ವಂಚಿಸಿ ಪರಾರಿಯಾಗಿದ್ದಾನೆ.

ಫೆ.2 ರಂದು ಹಣ ಡಿಪಾಜಿಟ್ ಮಾಡಿದ್ದೇನೆಂದು ನಂಬಿದ್ದ ಮಹಿಳೆ ಇನ್ನೂ ಖಾತೆಗೆ ಹಣ ಜಮಾವಣೆ ಆಗದ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಿದ್ದಾಳೆ. ಎಟಿಎಂನಲ್ಲಿ ತಾಂತ್ರಿಕ ದೋಷವಾಗಿರಬಹುದು ಏಳು ದಿನ ಬಿಟ್ಟು ಹಣ ಜಮೆ ಆಗಬಹುದು ಎಂದು ಬ್ಯಾಂಕ್ ಸಿಬ್ಬಂದಿ ಹೇಳಿ ಕಳುಹಿಸಿದ್ದರು.

ಇಷ್ಟಾದರೂ ಖಾತೆಗೆ ಹಣ ಜಮೆ ಆಗದ ಹಿನ್ನೆಲೆ, ಪರಿಶೀಲನೆ ನಡೆಸಿದಾಗ ಮಹಿಳೆಯು ವಂಚನೆಗೊಳಗಾಗಿರುವ ಸಂಗತಿ ತಿಳಿದು ಬಂದಿದೆ. ಮಹಿಳೆಗೆ ಅಪರಿಚಿತ ವ್ಯಕ್ತಿ ವಂಚಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಅಪರಿಚಿತ ವ್ಯಕ್ತಿ ಪತ್ತೆಗೆ ಮುಂದಾಗಿದ್ದಾರೆ.

ABOUT THE AUTHOR

...view details