ಕರ್ನಾಟಕ

karnataka

ETV Bharat / state

ಕಾಮೇಗೌಡರ ಕೆರೆಗಳ ನಿರ್ಮಾಣದ ಕಥೆ -ವ್ಯಥೆ : ಇಲ್ಲಿದೆ ವಾಸ್ತವ ಚಿತ್ರಣ - ಮಂಡ್ಯದ ಕೆರೆ ಕಾಮೇಗೌಡ

ಈ ಟಿವಿ ಭಾರತ ಮಳವಳ್ಳಿಯ ದಾಸನದೊಡ್ಡಿಯ ಕುಂದನಿ ಬೆಟ್ಟಕ್ಕೆ ತೆರಳಿ ವಸ್ತುಸ್ಥಿತಿ ಬಗ್ಗೆ ಪರಿಶೀಲನೆ ಮಾಡಿತು. ಡ್ರೋನ್​​​ ಬಳಸಿ ಇಡೀ ಬೆಟ್ಟದ ಕೆರೆಗಳ ಸರ್ವೇಕ್ಷಣೆ ಮಾಡಿತು. ಸ್ಥಳೀಯರಿಂದಲೂ ಮಾಹಿತಿ ಕಲೆ ಹಾಕಿದೆ. ಅಲ್ಲಿ ಕಲೆಹಾಕಲಾದ ಮಾಹಿತಿ ಹಾಗೂ ಕೆರೆ ನಿರ್ಮಾಣ ಕುರಿತು ವಾಸ್ತವ ವರದಿ ಇಲ್ಲಿದೆ.

kere-kamegowda
kere-kamegowda

By

Published : Jul 22, 2020, 11:37 AM IST

ಮಂಡ್ಯ:ಡ್ರೋನ್​​​​ ಪ್ರತಾಪನ ನಂತರ ಹೆಚ್ಚು ಚರ್ಚಿತವಾದ ವಿಷಯ ಎಂದರೆ ಕಾಮೇಗೌಡರ ಕೆರೆ ನಿರ್ಮಾಣದ ಕಥೆ. ಕೆಲವರು ಕೆರೆಯೇ ನಿರ್ಮಾಣವಾಗಿಲ್ಲ ಎಂಬ ವಾದಕ್ಕೆ ಬಿದ್ದು ಟ್ರೋಲ್ ಮಾಡಿಯೇ ಬಿಟ್ಟರು. ಆದರೆ ವಾಸ್ತವವೇನು ಎಂಬುದೇ ಇದುವರೆಗೂ ಚರ್ಚಿತವಾಗದ ವಿಷಯ.

ವಾಸ್ತವ ವಿಚಾರ ತಿಳಿಯಲು ಈ ಟಿವಿ ಭಾರತ ಮಳವಳ್ಳಿಯ ದಾಸನದೊಡ್ಡಿಯ ಕುಂದನಿ ಬೆಟ್ಟಕ್ಕೆ ತೆರಳಿ ವಸ್ತುಸ್ಥಿತಿ ಬಗ್ಗೆ ಪರಿಶೀಲನೆ ಮಾಡಿತು. ಡ್ರೋನ್​​ ಬಳಸಿ ಇಡೀ ಬೆಟ್ಟದ ಕೆರೆಗಳ ಸರ್ವೇಕ್ಷಣೆ ಮಾಡಿತು. ಸ್ಥಳೀಯರಿಂದಲೂ ಮಾಹಿತಿ ಕಲೆ ಹಾಕಿತು.

ಕೆರೆ ಕಾಮೇಗೌಡರ ವಾಸ್ತವದ ಚಿತ್ರಣ

ಕಾಮೇಗೌಡರು ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಕುಂದಿನ ಬೆಟ್ಟದಲ್ಲಿ ಏಳೆಂಟು ಗುಂಡಿಗಳನ್ನು ನಿರ್ಮಾಣ ಮಾಡಿದ್ದಾರೆ. ದಾಸನದೊಡ್ಡಿಯ ಗ್ರಾಮಸ್ಥರೇ ಈ ವಿಚಾರವನ್ನು ಈ ಟಿವಿ ಭಾರತಕ್ಕೆ ತಿಳಿಸಿದ್ದಾರೆ. ಹಾಗಾದರೆ ಅವರು ತೋಡಿಸಿರುವ ಗುಂಡಿಗಳ ಉದ್ದ, ಆಳದ ಬಗ್ಗೆ ತಿಳಿಯುವುದೂ ಬಹಳ ಮುಖ್ಯ. ಯಾಕೆಂದರೆ ಅವು ಕೆರೆಯೋ ಅಥವಾ ಸಾಮಾನ್ಯ ಗುಂಡಿಯೋ ಎಂಬ ಪ್ರಶ್ನೆಯೂ ಎದ್ದಿದೆ. ಪ್ರತಿಯೊಂದು ಕಟ್ಟೆಯೂ ಹಲವು ಅಡಿಗಳ ಆಳವನ್ನು ಹೊಂದಿದ್ದು, ಉದ್ದ ಮತ್ತು ಅಗಲದ ಬಗ್ಗೆ ನೋಡುವುದಾದರೆ ಸರಾಸರಿ ಎರಡು ಎಕರೆಯಿಂದ 20 ಗುಂಟೆವರೆಗೂ ವಿಸ್ತಾರ ಹೊಂದಿವೆ.

ಕಾಮೇಗೌಡರು ಬೆಟ್ಟದಲ್ಲಿ ಸುಮಾರು 13 ಕಡೆ ಜೆಸಿಬಿ ಮೂಲಕ ಗುಂಡಿ ತೋಡಿಸಿದ್ದಾರೆ. ಯಾವಾಗ ಸೋಷಿಯಲ್ ಮೀಡಿಯಾ ಹಾಗೂ ಕೆಲವು ಮಾಧ್ಯಮಗಳು ಕಾಮೇಗೌಡರ ಕೆರೆ ಬಗ್ಗೆ ಪ್ರಶ್ನೆೆ ಎತ್ತಿ ವರದಿ ಪ್ರಕಟ ಮಾಡಿದವೋ ಅಂದೇ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಬೇಕಾಗಿದ್ದ ಮಂಡ್ಯ ಡಿಸಿ ವೆಂಕಟೇಶ್ ಅವರು ಕಾಮೇಗೌಡರ ಫೈಲ್ ವಾಪಸ್ ಪಡೆದುಕೊಂಡಿದ್ದಾರೆ.

ಕಾಮೇಗೌಡರ ಸತ್ಯಾಸತ್ಯತೆ ತಿಳಿಯಲು ಕೆಲವರು ಸ್ಥಳ ಪರಿಶೀಲನೆಗೆ ತೆರಳಿ ಪರಿಶೀಲನೆಯನ್ನೂ ಮಾಡಿದರು. ಅದೇ ರೀತಿಯಲ್ಲಿ ’ಈಟಿವಿ ಭಾರತ’ ಕೂಡ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದಾಗ ಸುಮಾರು 13 ಕಡೆ ಸಣ್ಣ ಹಾಗೂ ದೊಡ್ಡ ಕಟ್ಟೆಗಳನ್ನ ತೋಡಿಸಿರುವುದು ಕಂಡು ಬಂದಿತು. ಇನ್ನು ನೀರು ನಿಲ್ಲಿಸಲು ಗುಂಡಿ ತೋಡಿಸಿರುವ ಬಗ್ಗೆ ಖುದ್ದು ಗ್ರಾಮಸ್ಥರೇ ಒಪ್ಪಿಕೊಂಡಿದ್ದಾರೆ.

ಹಾಗಾದರೆ ಕಾಮೇಗೌಡರ ಕೆರೆ ಕಟ್ಟಿದ ಕಥೆ ಸುಳ್ಳು ಎಂಬುದಕ್ಕೆ ಕಾರಣವೂ ಇದೆ. ಯಾಕೆಂದರೆ ಸುಮಾರು 20 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಚಾಚಿಕೊಂಡಿದ್ದರೆ ಮಾತ್ರ ಮಂಡ್ಯ ಕಡೆ ಜನರು ಕೆರೆ ಎಂದು ಹೇಳುತ್ತಾರೆ. ಆದರೆ, ಇವು ಕೇವಲ ಒಂದೂವರೆ ಎರಡು ಎಕರೆ ವಿಸ್ತಾರದ ಕೆರೆಗಳಾಗಿರುವುದರಿಂದ ಇಲ್ಲಿನ ಜನರು ಕೆರೆ ಎಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಇವು ಕೆರೆಗಳಲ್ಲ ಗುಂಡಿ ಎಂಬುದು ಇಲ್ಲಿನ ಗ್ರಾಮಸ್ಥರ ವಾದ. ಇನ್ನು ಕಾಮೇಗೌಡರ ಜೊತೆಗೆ ಗ್ರಾಮಸ್ಥರಿಗೆ ವೈಯಕ್ತಿಕ ದ್ವೇಷವೂ ಇದೆ. ಹೀಗಾಗಿ ಗ್ರಾಮಸ್ಥರು ಕಾಮೇಗೌಡರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ ಎನ್ನಲಾಗುತ್ತಿದೆ.

ಕಾಮೇಗೌಡರ ಕಟ್ಟೆ ನಿರ್ಮಾಣ ಕುರಿತು ರಾಜಕಾರಣಿಗಳೂ ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ. ಕೆಲವರು ಕಟ್ಟೆ ನಿರ್ಮಾಣ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾಕಾಗಿ ಕಾಮೇಗೌಡರ ಬಗ್ಗೆ ಋಣಾತ್ಮಕ ಚಿಂತನೆ ಬಂದಿದೆ ಎಂಬ ಪ್ರಶ್ನೆೆಯೂ ಎದ್ದಿದೆ. ಕಾಮೇಗೌಡರ ಒಬ್ಬ ಪುತ್ರ ತಂದೆಯಂತೆ ಕುರಿ ಕಾಯುತ್ತಿದ್ದರೆ, ಮತ್ತೊಬ್ಬ ಟೈಲರಿಂಗ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಇಷ್ಟೆಲ್ಲ ಆದ ಮೇಲೆ ಒಂದು ಮಾತು ಸತ್ಯ. ಅಲ್ಲಿ ಪ್ರಾಣಿಗಳಿಗೆ ಅನುಕೂಲವಾಗಲು ಕಟ್ಟೆ ನಿರ್ಮಾಣ ಮಾಡಿರೋದಂತೂ ನಿಜ. ಮೊದಲು ಸಣ್ಣ ಪ್ರಮಾಣದಲ್ಲಿದ್ದ ಕಟ್ಟೆಗಳು ಈಗ ಯಂತ್ರಗಳ ಕಾರ್ಯಾಚರಣೆ ಮೂಲಕ ಸ್ವಲ್ಪ ದೊಡ್ಡದಾಗಿವೆ. ಕೆಲವರ ವಾದದ ಪ್ರಕಾರ ಮೀಡಿಯಾದಲ್ಲಿ ಸುದ್ದಿಯಾದ ಮೇಲೆ ಜೆಸಿಬಿಯಿಂದ ಸಣ್ಣ ಕೆರೆಗಳನ್ನ ನಿರ್ಮಾಣ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.

ಇನ್ನು ಕಾಮೇಗೌಡರ ಮೇಲಿನ ವೈಯಕ್ತಿಯ ದ್ವೇಷಕ್ಕೆ ಇಲ್ಲ ಸಲ್ಲದ ಸುದ್ದಿಗಳು ಹುಟ್ಟಿಕೊಂಡಿವೆ. ಕೆರೆ ನಿರ್ಮಾಣ ಮಾಡಿ ಯಾರನ್ನೂ ಬೆಟ್ಟಕ್ಕೆ ಬಿಟ್ಟುಕೊಳ್ಳದ ಕಾಮೇಗೌಡರ ಹೆಸರು ಪದ್ಮಶ್ರೀಯಿಂದ ಹಿಂದೆ ಸರಿದಿದೆ.

ABOUT THE AUTHOR

...view details