ಕರ್ನಾಟಕ

karnataka

ETV Bharat / state

ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ನೆರವಾಗಲಿದೆ SSLC ಮಿತ್ರ ಮೊಬೈಲ್ ಆ್ಯಪ್ - ಎಸ್​ಎಸ್​ಎಲ್​ಸಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ನೆರವಾಗಲಿದೆ SSLC ಮಿತ್ರ ಮೊಬೈಲ್ ಆ್ಯಪ್

ಎಸ್.ಎಸ್.ಎಲ್.ಸಿ ಪರೀಕ್ಷಾ ಸಿದ್ಧತೆಯ ದೃಷ್ಠಿಯಿಂದ ಈ ಆ್ಯಪ್ ಬಹಳ ಉಪಯುಕ್ತವಾಗಿದೆ. ರಾಜ್ಯದ ಎಲ್ಲಾ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಇದರ ಸದುಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ತಿಳಿಸಿದೆ.

SSLC Mitra App helps students in exams
ಎಸ್​ಎಸ್​ಎಲ್​ಸಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ನೆರವಾಗಲಿದೆ SSLC ಮಿತ್ರ ಮೊಬೈಲ್ ಆ್ಯಪ್

By

Published : Jul 5, 2021, 3:24 PM IST

ಮಂಡ್ಯ:ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಸ್ವಯಂ ಅಧ್ಯಯನ ಮಾಡಲು ಅನುಕೂಲವಾಗುವಂತೆ ಎಸ್.ಎಸ್.ಎಲ್.ಸಿ ಮಿತ್ರ ಎಂಬ ಶೈಕ್ಷಣಿಕ ಮೊಬೈಲ್ ಆ್ಯಪ್ ಅ​​​​​ನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಅಭಿವೃದ್ಧಿಪಡಿಸಿದೆ‌.

ಕೋವಿಡ್ ಕಾರಣದಿಂದ ಶಾಲೆಗಳಿಗೆ ವಿದ್ಯಾರ್ಥಿಗಳು ಭೌತಿಕವಾಗಿ ಹಾಜರಾಗಲು ಸಾಧ್ಯವಾಗದ ಕಾರಣ, ಈ ವಿಶೇಷ ಆ್ಯಪ್ ಬಿಡುಗಡೆಗೊಳಿಸಲಾಗಿದೆ. ಈ ಆ್ಯಪ್‌ನಲ್ಲಿ 6 ವಿಷಯಗಳ ಎಲ್ಲಾ ಘಟಕಗಳಿಗೂ ಲಭ್ಯವಿರುವ ವಿಡಿಯೋ ಪಾಠಗಳು, ಸಂವೇದ ತರಗತಿಗಳು, ಆನ್​ಲೈನ್ ಕ್ವಿಜ್, ಪ್ರಶ್ನೆಕೋಶ ಹಾಗು ಇತರೆ ಎಲ್ಲಾ ಇ- ಸಂಪನ್ಮೂಲಗಳನ್ನು ಒಂದೇ ಸೂರಿನಡಿ ಒದಗಿಸಲಾಗಿದೆ.

ಎಸ್.ಎಸ್.ಎಲ್.ಸಿ ಪರೀಕ್ಷಾ ಸಿದ್ಧತೆಯ ದೃಷ್ಠಿಯಿಂದ ಆ್ಯಪ್‌ ಬಹಳ ಉಪಯುಕ್ತವಾಗಿದ್ದು, ರಾಜ್ಯದ ಎಲ್ಲಾ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಇದರ ಸದುಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ತಿಳಿಸಿದೆ. ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಲು https://dietmandya.in/sslcmithra/ ಲಿಂಕ್ ಅಥವಾ ಕ್ಯೂ ಆರ್ ಕೋಡ್ ಅನ್ನು ಬಳಸಿ ಡೌನ್​ಲೋಡ್​ ಮಾಡಿಕೊಳ್ಳಬಹುದಾಗಿದೆ ಎಂದು ಮಂಡ್ಯ ಡಯಟ್‌ನ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಹಾಯದ ನೆಪದಲ್ಲಿ ಅತ್ಯಾಚಾರ: ವಿಡಿಯೋ ಸಮೇತ ದೂರಿನನ್ವಯ ಗೊಕಾಕ್‌ನಲ್ಲಿ ಆರೋಪಿ ಅರೆಸ್ಟ್

ABOUT THE AUTHOR

...view details