ಕರ್ನಾಟಕ

karnataka

ETV Bharat / state

ಅಕ್ರಮ ಗಣಿಗಾರಿಕೆ ವಿರುದ್ಧ ಸುಮಲತಾ ಸಮರ: ಶ್ರೀರಂಗಪಟ್ಟಣದ ಕಲ್ಲು ಕ್ವಾರಿ ಮುಚ್ಚಿಸಿದ ಅಧಿಕಾರಿಗಳು!

ಅಕ್ರಮ ಕಲ್ಲು ಗಣಿಗಾರಿಕೆಗೆ ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿದ್ದ ಬೆನ್ನಲ್ಲೇ ಇದೀಗ ಶ್ರೀರಂಗಪಟ್ಟಣ ತಾಲೂಕಿನ ಕಲ್ಲು ಕ್ವಾರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಬಂದ್ ಮಾಡಿಸಿದ್ದಾರೆ.

ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಸುಮಲತಾ ಸಮರ
ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಸುಮಲತಾ ಸಮರ

By

Published : Jul 11, 2021, 5:32 PM IST

ಮಂಡ್ಯ:ಶ್ರೀರಂಗಪಟ್ಟಣ ತಾಲೂಕಿನ ಚೆನ್ನನಕೆರೆ ಸಮೀಪದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಕಲ್ಲು ಕ್ವಾರಿ ಪ್ರದೇಶಗಳಿಗೆ ಶ್ರೀರಂಗಪಟ್ಟಣ ತಹಶೀಲ್ದಾರ್ ಪೊಲೀಸರ ಜೊತೆ ದಾಳಿ ನಡೆಸಿ ಹಲವು ಕ್ವಾರಿಗಳಿಗೆ ಬೀಗ ಜಡಿದರು.

ಸಂಸದೆ ಸುಮಲತಾ ಇತ್ತೀಚಿಗಷ್ಟೆ ಶ್ರೀರಂಗಪಟ್ಟಣ ತಾಲೂಕಿನ ಚೆನ್ನನಕೆರೆ ಮತ್ತು ಹಂಗರಹಳ್ಳಿಯಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕಗೆ ಭೇಟಿ ನೀಡಿದ್ದರು. ಅಲ್ಲದೇ ಪರಿಶೀಲನೆಗೆ ಅಡ್ಡಿಪಡಿಸಿದ್ದಕ್ಕೆ ಇದೇನು ಭಾರತ-ಪಾಕಿಸ್ತಾನ ಗಡಿನಾ? ಎಂದು ಆಕ್ರೋಶ ಹೊರಹಾಕಿದ್ದರು. ಇದೇ ವೇಳೆ, ಗಣಿಗಾರಿಕೆಯಿಂದ ಹತ್ತಿರದ ಮನೆಗಳಿಗೆ ಉಂಟಾದ ಹಾನಿಯನ್ನು ಅವರು ಪರಿಶೀಲಿಸಿದ್ದರು. ಬಳಿಕ ಅಕ್ರಮ ಕಲ್ಲು ಕ್ವಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದರು.

ಈ ಸೂಚನೆಯ ಬೆನ್ನಲ್ಲೇ ಅಧಿಕಾರಿಗಳು ದಾಳಿ ಮಾಡಿ ಅಕ್ರಮ ಕಲ್ಲು ಕ್ವಾರಿಗಳಿಗೆ ಕಡಿವಾಣ ಹಾಕಿ‌ ಕಠಿಣ ಕ್ರಮಕ್ಕೆ ಮುಂದಾಗಿದ್ದು ಕಲ್ಲು ಗಣಿಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ‌.

ಇದನ್ನೂ ಓದಿ:ಮುಂದುವರಿದ ಗಣಿ ವಿವಾದ : ಸಂಸದೆ ಸುಮಲತಾ ಭೇಟಿ ವೇಳೆ ಕಲ್ಲು ಮಣ್ಣು ಹಾಕಿ ರಸ್ತೆ ಬಂದ್​ ಮಾಡಿದ ಕಿಡಿಗೇಡಿಗಳು!

ABOUT THE AUTHOR

...view details