ಮಂಡ್ಯ:ಜಿಲ್ಲೆಯ ಶ್ರೀರಂಗಪಟ್ಟಣ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, 20ಕ್ಕೂ ಅಧಿಕ ಪ್ರವಾಸಿ ಕೇಂದ್ರಗಳಿವೆ. ಆದರೆ ಕೊರೊನಾದಿಂದ ಪ್ರವಾಸೋದ್ಯಮ ಲಾಭವಿಲ್ಲದೇ ನಷ್ಟ ಅನುಭವಿಸುತ್ತಿದೆ.
ಶ್ರೀರಂಗಪಟ್ಟಣ ಎಲ್ಲರಿಗೂ ಅಚ್ಚುಮೆಚ್ಚಿನ ತಾಣವಾಗಿದ್ದು, ಇಲ್ಲಿ ಕಾವೇರಿ ತಾಯಿಯ ಸೌಂದರ್ಯ ಸವಿಯುವುದರ ಜೊತೆಗೆ ಶ್ರೀರಂಗ, ನಿಮಿಷಾಂಭ, ಕೋಟೆ, ಗುಂಬಜ್, ದರಿಯ ದೌಲತ್, ಸಂಗಮ್, ಮದ್ದಿನ ಮನೆ ಸೇರಿದಂತೆ ಇನ್ನೂ ಹಲವು ಪ್ರವಾಸಿ ಕೇಂದ್ರಗಳಿವೆ. ಇದರ ಜೊತೆಗೆ ಪ್ರವಾಸಿಗರಿಗೆ ಮುದ ನೀಡುವ ಕುದುರೆ ಸವಾರಿ, ಬೋಟಿಂಗ್, ಪಕ್ಷಿಧಾಮ ಹೀಗೆ ಹಲವು ವೈವಿದ್ಯಮಯ ಮನೋರಂಜನಾ ಕೇಂದ್ರಗಗಳಿವೆ.