ಕರ್ನಾಟಕ

karnataka

ETV Bharat / state

ಅದ್ಧೂರಿಯಾಗಿ ನೇರವೇರಿದ ಶ್ರೀರಂಗಪಟ್ಟಣ ದಸರಾ ಸಮಾರೋಪ ಕಾರ್ಯಕ್ರಮ - ಶ್ರೀರಂಗಪಟ್ಟಣ ದಸರಾ ಸಮಾರೋಪ ಕಾರ್ಯಕ್ರಮ

ಶ್ರೀರಂಗಪಟ್ಟಣ ದಸರಾ ಸಮಾರೋಪ ಸಮಾರಂಭದಲ್ಲಿ ಆರೋಗ್ಯ, ಕಂದಾಯ, ಪೊಲೀಸ್, ಆಶಾ, ಅಂಗನವಾಡಿ ಇಲಾಖೆಯ ಕೊರೊನಾ ವಾರಿಯರ್ಸ್ ಗಳಿಗೆ ಸನ್ಮಾನ ಮಾಡಲಾಯಿತು.

ಶ್ರೀರಂಗಪಟ್ಟಣ ದಸರಾ ಸಮಾರೋಪ ಕಾರ್ಯಕ್ರಮ
ಶ್ರೀರಂಗಪಟ್ಟಣ ದಸರಾ ಸಮಾರೋಪ ಕಾರ್ಯಕ್ರಮ

By

Published : Oct 11, 2021, 10:00 PM IST

Updated : Oct 11, 2021, 10:53 PM IST

ಮಂಡ್ಯ: ಕೊರೊನಾ ಕಡಿಮೆ ಆಗಿದ್ದರೂ ನಾಡಿನಾದ್ಯಂತ ಸರಳ ದಸರಾ ಅಚರಣೆ ಮಾಡಲಾಗುತ್ತಿದೆ. ಕೋವಿಡ್​ನಿಂದಾಗಿ ಶ್ರೀರಂಗಪಟ್ಟಣದಲ್ಲಿ ಸರಳ ದಸರಾ ನಡೆಸಲಾಯಿತು. ಇಂದು ಸಮಾರೋಪ ಸಮಾರಂಭ ಸಹ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕಂದಾಯ ಸಚಿವ ಆರ್​ ಅಶೋಕ್​, ಮುಂದಿನ ದಸರಾವನ್ನು ಇನ್ನು ಅದ್ಧೂರಿಯಾಗಿ ಮಾಡುವಂತಾಗಲಿ. ಈ‌ ಬಾರಿ 3 ದಿನದ ದಸರಾ ಮುಂದಿನ ಬಾರಿ 5 ದಿನ ನಡೆಯಲಿ ಎಂದು ಆಶಿಸಿದರು.

ಇದೇ ಕಾರ್ಯಕ್ರಮದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಮೈಸೂರು ದಸರಾದ ಮೂಲನೆಲೆ ಶ್ರೀರಂಗಪಟ್ಟಣ. ಹೀಗಾಗಿ 2019 ರಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅದ್ಧೂರಿಯಾಗಿ ದಸರಾ ನಡೆಸಿಕೊಟ್ಟಿದ್ದರು. ಅದೇ‌ ರೀತಿ ರಾಜ್ಯ ಸರ್ಕಾರ ದಸರಾ ಮುಂದುವರೆಸಿಕೊಂಡು ಹೋಗಲಿ ಎಂದ ಅವರು, ಮುಂದಿನ ದಿನಗಳಲ್ಲಿ ಶ್ರೀರಂಗಪಟ್ಟಣ ದಸರಾಕ್ಕೆ ಪ್ರತ್ಯೇಕ ಹಣ ಮೀಸಲಿಡುವಂತೆ ಸರ್ಕಾರವನ್ನು ಆಗ್ರಹಿಸಿದರು.

ಕಂದಾಯ ಸಚಿವರಿಗೆ ಧನ್ಯವಾದ ತಿಳಿಸಿದ ಶಾಸಕ: ಕೆ.ಆರ್.ಎಸ್ ಅನ್ನು ಕಂದಾಯ ಗ್ರಾಮವಾಗಿಸುವಂತೆ ಮನವಿ ಮಾಡಿದ್ದೆ. ಇವತ್ತು ಕೆ.ಆರ್.ಎಸ್ ಗ್ರಾಮ ಎಂದು ಘೋಷಣೆಯಾಗಿದೆ. ಆದ್ದರಿಂದ ಕಂದಾಯ ಗ್ರಾಮವಾಗಲು‌ ಕಾರಣರಾದ ಕಂದಾಯ ಸಚಿವ ಆರ್.ಅಶೋಕ್ ಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಶ್ರೀರಂಗಪಟ್ಟಣ ದಸರಾ ಸಮಾರೋಪ ಕಾರ್ಯಕ್ರಮ

ಕೊರೋನಾ ವಾರಿಯರ್ಸ್ ಗಳಿಗೆ ಸನ್ಮಾನ: ಶ್ರೀರಂಗಪಟ್ಟಣ ದಸರಾ ಸಮಾರೋಪ ಸಮಾರಂಭದಲ್ಲಿ ಆರೋಗ್ಯ, ಕಂದಾಯ, ಪೊಲೀಸ್, ಆಶಾ, ಅಂಗನವಾಡಿ ಇಲಾಖೆಯ ಕೊರೊನಾ ವಾರಿಯರ್ಸ್ ಗಳಿಗೆ ಸಚಿವರಾದ ಆರ್. ಅಶೋಕ್, ಸೋಮಶೇಖರ್, ನಾರಾಯಣ ಗೌಡರು ಸನ್ಮಾನ ಮಾಡಿದರು.

ಜಿಟಿ ಜಿಟಿ ಮಳೆ ನಡುವೆ ದಸರಾ:

ಕೋವಿಡ್​ನಿಂದಾಗಿ ಶ್ರೀರಂಗಪಟ್ಟಣದಲ್ಲಿ ಸರಳ ದಸರಾ ಆಚರಣೆ ಆರಂಭಗೊಂಡು ಮೂರು ದಿನಗಳ ನಿರಂತರ ಜಿಟಿ ಜಿಟಿ ಮಳೆ ನಡುವೆಯೂ ಶ್ರೀರಂಗಪಟ್ಟಣ ದಸರಾ ಯಶಸ್ವಿಯಾಗಿದೆ. ಸ್ಟಾರ್ ನೈಟ್, ಫ್ಯಾಷನ್ ಶೋ ಬಳಿಕ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಇಂದು ತೆರೆ ಬಿದ್ದಿತು. ಸಾಂಪ್ರದಾಯಿಕ ಕ್ಯಾಟ್ ವಾಕ್, ಸ್ಯಾನೆ ಟಾಫಾಗವ್ಳೆ, ನಮ್ಮುಡಿಗಿ ಸ್ಯಾನೆ ಟಾಫಾಗವ್ಳೆ. ಬ್ರಹ್ಮಾಚಾರಿ ಸಿನಿಮಾದ ಹಾಡಿನ ನೃತ್ಯಕ್ಕೆ ನಟಿ ಅದಿತಿ ಪ್ರಭುದೇವನ್ ನೃತ್ಯ ಮಾಡಿದ್ದು, ಪ್ರೇಕ್ಷಕರು ಫುಲ್ ಫಿದಾ ಆದರು.

ನಟಿ ಮೇಘನಾ ಗಾಂವ್‌ಕರ್ ತಾವೆ ಅಭಿನಯಿಸಿರುವ ಚಾರ್ ಮೀನಾರ್ ಸಿನಿಮಾದ ಸಾಂಗ್ ಗೆ ನೃತ್ಯ ಮಾಡಿ ರಂಜಿಸಿದರು. ಈ ಮೂಲಕ ಶ್ರೀರಂಗಪಟ್ಟಣ ದಸರಾಗೆ ತೆರೆ ಎಳೆಯಲಾಯಿತು.

Last Updated : Oct 11, 2021, 10:53 PM IST

ABOUT THE AUTHOR

...view details