ಕರ್ನಾಟಕ

karnataka

ETV Bharat / state

ಕೆಆರ್‌ಎಸ್ ಅಣೆಕಟ್ಟಿಗೆ ದೃಷ್ಟಿ ನಿವಾರಣಾ ಪೂಜೆ - ಕೆಆರ್‌ಎಸ್ ಅಣೆಕಟ್ಟಿನಲ್ಲಿ ಬಿರುಕು

ಕೆಆರ್‌ಎಸ್ ಅಣೆಕಟ್ಟಿಗೆ ದೃಷ್ಟಿ ನಿವಾರಣಾ ಪೂಜೆ ನಡೆಸಲಾಗುತ್ತಿದ್ದು, ಹೋಮ ಹಾಗೂ ಕಾವೇರಿ ಮಾತೆಗೆ ಅಭಿಷೇಕ ಮಾಡಲಾಗುತ್ತಿದೆ.

MND
MND

By

Published : Jul 26, 2021, 12:07 PM IST

ಮಂಡ್ಯ: ವಿಶ್ವವಿಖ್ಯಾತ ಕೆಆರ್‌ಎಸ್ ಅಣೆಕಟ್ಟಿನಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನುವ ವಿಚಾರದ ಹಿನ್ನೆಲೆ ಇಂದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಡ್ಯಾಂ ಬಳಿ ದೃಷ್ಟಿ ನಿವಾರಣಾ ಪೂಜೆ ಮಾಡಿಸುತ್ತಿದ್ದಾರೆ.

ವೇ.ಬ್ರ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯುತ್ತಿದ್ದು, ಹೋಮ ಹಾಗೂ ಕಾವೇರಿ ಮಾತೆಗೆ ಅಭಿಷೇಕದ ಮೂಲಕ ದೃಷ್ಟಿ ದೋಷ ನಿವಾರಣೆ ಪೂಜೆ ಆರಂಭಿಸಿದ್ದಾರೆ.

ಕೆಆರ್‌ಎಸ್ ಅಣೆಕಟ್ಟಿಗೆ ಪೂಜೆ

ಪೂಜಾ ಕೈಂಕರ್ಯದಲ್ಲಿ ಶಾಸಕ ಸಿಎಸ್ ಪುಟ್ಟರಾಜು, ಎಂ.ಶ್ರೀನಿವಾಸ್, ಡಾ.ಕೆ.ಅನ್ನದಾನಿ, ಸುರೇಶ್ ಗೌಡ, ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಸೇರಿದಂತೆ ಇತರರು ಭಾಗಿಯಾಗಿದ್ದಾರೆ.

ABOUT THE AUTHOR

...view details