ಮಂಡ್ಯ: ಕೌಟುಂಬಿಕ ಕಲಹದಿಂದ ಅಳಿಯನೊಬ್ಬ ತನ್ನ ಮಾವನನ್ನೇ ಕೊಡಲಿಯಿಂದ ಹೊಡೆದು ಕೊಂದ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಡೆದಿದೆ.
ಕೌಟುಂಬಿಕ ಕಲಹ: ಮಾವನನ್ನೇ ಕೊಂದ ಅಳಿಯ!
ಕಳೆದ ಕೆಲ ದಿನಗಳಿಂದ ಕುಟುಂಬದಲ್ಲಿ ಜಗಳವಾಗುತ್ತಲೇ ಇತ್ತು. ಇಂದು ಕೂಡ ಜಗಳ ವಿಕೋಪಕ್ಕೆ ತಿರುಗಿ ಕುಪಿತಗೊಂಡ ರಘು ಕೊಡಲಿಯಿಂದ ತನ್ನ ಮಾವನ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಅಳಿಯ
ಚಿನಕುರಳಿ ಗ್ರಾಮದ ಸುರೇಶ್ (50) ಹತ್ಯೆಯಾದ ವ್ಯಕ್ತಿ. ಈತನ ಮಗಳನ್ನು 8 ವರ್ಷದ ಹಿಂದೆ ಇದೇ ಗ್ರಾಮದ ರಘು ಅಲಿಯಾಸ್ ಜಿಮ್ಮಿ ಮದುವೆಯಾಗಿದ್ದ. ಕಳೆದ ಕೆಲ ದಿನಗಳಿಂದ ಕುಟುಂಬದಲ್ಲಿ ಜಗಳವಾಗುತ್ತಲೇ ಇತ್ತು. ಇಂದು ಕೂಡ ಜಗಳ ವಿಕೋಪಕ್ಕೆ ತಿರುಗಿ ಕುಪಿತಗೊಂಡ ರಘು ಕೊಡಲಿಯಿಂದ ತನ್ನ ಮಾವನ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಪಾಂಡವಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Dec 11, 2020, 4:27 PM IST