ಕರ್ನಾಟಕ

karnataka

ETV Bharat / state

ಗ್ಯಾಸ್ ವಿತರಕ ಕಚೇರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು - ಪಾಂಡವಪುರ ತಾಲೂಕಿನ ಬಿಂಡಹಳ್ಳಿಯಲ್ಲಿ ಗ್ರಾಮ

ದುಷ್ಕರ್ಮಿಗಳು ಗ್ಯಾಸ್ ಗೋಡನ್‌ ಕಚೇರಿಗೆ ಬೆಂಕಿ ಹಚ್ಚಿದ ಪರಿಣಾಮ ಕಚೇರಿಯಲ್ಲಿದ್ದ ದಾಖಲೆ ಸೇರಿ ಕಂಪ್ಯೂಟರ್ ಬೆಂಕಿಗೆ ಆಹುತಿಯಾದ ಘಟನೆ ಪಾಂಡವಪುರ ತಾಲೂಕಿನ ಬಿಂಡಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.

set fire to the gas distributor's office
ಗ್ಯಾಸ್ ವಿತರಕ ಕಚೇರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

By

Published : Feb 21, 2020, 1:29 PM IST

ಮಂಡ್ಯ:ಗ್ಯಾಸ್ ಗೋಡನ್‌ನ ಕಚೇರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಕಚೇರಿಯಲ್ಲಿದ್ದ ದಾಖಲೆ ಸೇರಿ ಕಂಪ್ಯೂಟರ್ ಬೆಂಕಿಗೆ ಆಹುತಿಯಾದ ಘಟನೆ ಪಾಂಡವಪುರ ತಾಲೂಕಿನ ಬಿಂಡಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.

ಗ್ಯಾಸ್ ವಿತರಕ ಕಚೇರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಬಿಂಡಹಳ್ಳಿ ಗ್ರಾಮದ ರಾಜೇಶ್ ಎಂಬುವರಿಗೆ ಸೇರಿದ ಈಶ್ವರಿ ಗ್ಯಾಸ್ ವಿತರಕ ಕೇಂದ್ರಕ್ಕೆ ಬೆಂಕಿ ಹಚ್ಚಲಾಗಿದ್ದು,‌ ಘಟನೆಯಲ್ಲಿ ಗೋಡನ್​​ನಲ್ಲಿದ್ದ ದಾಖಲೆಗಳು ಸಂಪೂರ್ಣ ಭಸ್ಮವಾಗಿವೆ.

ಕಚೇರಿಗೆ ಬೆಂಕಿ ಬಿದ್ದಿದ್ದರಿಂದ ಕಚೇರಿ ಸಂಪೂರ್ಣ ಸುಟ್ಟು ಹೋಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಶಮನ‌ ಮಾಡಿದರು. ಪಕ್ಕದಲ್ಲೇ ಇದ್ದ ಗ್ಯಾಸ್ ಗೋಡನ್‌ಗೆ ಯಾವುದೇ ಅಪಾಯ ಸಂಭವಿಸಿಲ್ಲ. ಈ ಸಂಬಂಧ ಕೆ.ಆರ್.ಎಸ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ABOUT THE AUTHOR

...view details