ಮಂಡ್ಯ :ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸೋಮಶೇಖರ್ ಎಸ್.ಜಿಗಣಿ 'ಕೊರೊನಾ ಗೆಲ್ಲೋಣ' ಎಂಬ ಜಾಗೃತಿ ಗೀತೆ ರಚಿಸಿ, ರಾಗ ಸಂಯೋಜಿಸಿ ನಿರ್ದೇಶಿಸಿದ್ದಾರೆ.
ಈ ಹಿಂದೆ ಎಸ್.ಜಿಗಣಿ ಅವರು ರಚಿಸಿದ್ದ 'ಇವರೇ ಮಹಾನಾಯಕ' ಗೀತೆ ಬಿಡುಗಡೆಗೊಂಡು ಭಾರೀ ಸದ್ದು ಮಾಡಿತ್ತು. ಇದೀಗ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಕ್ಕಾಗಿ 'ಕೊರೊನಾ ಗೆಲ್ಲೋಣ' ಎಂಬ ಜಾಗೃತಿ ಗೀತೆ ರಚಿಸಿದ್ದಾರೆ. ಈ ಹಾಡಿಗೆ ಕೆಜಿಎಫ್ನ ಪ್ರಖ್ಯಾತ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ಚೆಲುವೆಗೌಡ ಸಾಥ್ ನೀಡಿದ್ದಾರೆ.
- https://youtu.be/nepsHJGCDC0
ಈಗಾಗಲೇ ಯೂಟ್ಯೂಬ್ನಲ್ಲಿ ಹಾಡಿನ ಟೀಸರ್ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಪೂರ್ಣ ಹಾಡು ಬಿಡುಗಡೆಯಾಗಲಿದೆ. ಈ ಗೀತೆ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ತೆಗೆದುಕೊಂಡ ಕ್ರಮ, ಸಿದ್ಧತೆಗಳು, ಜನಪ್ರತಿನಿಧಿಗಳು, ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತರು, ಪೊಲೀಸರು, ವೈದ್ಯರ ಹೋರಾಟವನ್ನು ಒಳಗೊಂಡಿದೆ.