ಮಂಡ್ಯ: ಮಾಜಿ ವಿದೇಶಾಂಗ ಸಚಿವ, ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಇಂದು ತವರಿಗೆ ಆಗಮಿಸಿದರು.
ತವರಿಗೆ ಆಗಮಿಸಿದ ಎಸ್.ಎಂ. ಕೃಷ್ಣ: ಅಭಿಮಾನಿಗಳಿಂದ ಅಭಿನಂದನೆ - sm krishna visits mandya
ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಇಂದು ತಮ್ಮ ತವರು ಜಿಲ್ಲೆ ಮಂಡ್ಯಗೆ ಭೇಟಿ ನೀಡಿದ್ರು.
![ತವರಿಗೆ ಆಗಮಿಸಿದ ಎಸ್.ಎಂ. ಕೃಷ್ಣ: ಅಭಿಮಾನಿಗಳಿಂದ ಅಭಿನಂದನೆ sm krishna visits mandya](https://etvbharatimages.akamaized.net/etvbharat/prod-images/768-512-6361380-thumbnail-3x2-surya.jpg)
ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮಕ್ಕೆ ಆಗಮಿಸಿದ ಎಸ್.ಎಂ. ಕೃಷ್ಣಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು ಎಸ್.ಎಂ.ಕೃಷ್ಣರನ್ನು ಭೇಟಿ ಮಾಡಿ, ಪುಲ್ವಾಮ ದಾಳಿಯಲ್ಲಿ ಹುತಾತ್ಮನಾದ ಯೋಧ ಗುರು ಸ್ಮಾರಕಕ್ಕೆ ಭೇಟಿ ನೀಡುವಂತೆ ಮನವಿ ಸಲ್ಲಿಸಿದರು. ಈಗಾಗಲೇ ರಾಜ್ಯ ಸರ್ಕಾರಿ 25 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದ್ರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್.ಎಂ.ಕೃಷ್ಣ ಮತ್ತಷ್ಟು ಅನುದಾನಕ್ಕೆ ಸಚಿವ ಸಿ.ಟಿ. ರವಿಯವರಿಗೆ ಪತ್ರ ಬರೆಯೋದಾಗಿ ತಿಳಿಸಿದರು. ಜೊತೆಗೆ ಸ್ಮಾರಕವನ್ನು ಅಭಿವೃದ್ಧಿ ಮಾಡುವಂತೆ ಸೂಚನೆ ನೀಡಿದರು.