ಮಂಡ್ಯ: ನಗರದಲ್ಲಿ ಮುಸ್ಲಿಂ ಸಮುದಾಯದವರು ಮಾಜಿ ಸಿಎಂ ಸಿದ್ದರಾಮಯ್ಯರಿಗೆ ದುಬೈ ಶೇಖ್ ಉಡುಪು ಊಡುಗೊರೆಯಾಗಿ ಕೊಟ್ಟರು. ಅಭಿಮಾನಿಗಳು ಪ್ರೀತಿಯಿಂದ ಕೊಟ್ಟ ಉಡುಗೊರೆ ತೊಟ್ಟ ಸಿದ್ದರಾಮಯ್ಯ ಥೇಟ್ ದುಬೈ ಶೇಖ್ ರೀತಿ ಕಂಡುಬಂದರು.
ವಿವರ:
ಮಂಡ್ಯ: ನಗರದಲ್ಲಿ ಮುಸ್ಲಿಂ ಸಮುದಾಯದವರು ಮಾಜಿ ಸಿಎಂ ಸಿದ್ದರಾಮಯ್ಯರಿಗೆ ದುಬೈ ಶೇಖ್ ಉಡುಪು ಊಡುಗೊರೆಯಾಗಿ ಕೊಟ್ಟರು. ಅಭಿಮಾನಿಗಳು ಪ್ರೀತಿಯಿಂದ ಕೊಟ್ಟ ಉಡುಗೊರೆ ತೊಟ್ಟ ಸಿದ್ದರಾಮಯ್ಯ ಥೇಟ್ ದುಬೈ ಶೇಖ್ ರೀತಿ ಕಂಡುಬಂದರು.
ವಿವರ:
ಮಂಡ್ಯ ನಗರದ ಕಾಂಗ್ರೆಸ್ ಮುಖಂಡ ಮುನ್ವರ್ ಖಾನ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಈ ವೇಳೆ ಮುಸ್ಲಿಮರು ಸಿದ್ದುಗೆ ದುಬೈ ಶೇಕ್ ಉಡುಪು ಉಡುಗೊರೆ ಕೊಟ್ಟು ಸಂಭ್ರಮಿಸಿದರು. ಅಲ್ಲದೇ, ವಿಪಕ್ಷ ನಾಯಕನಿಗೆ ದುಬೈ ಶೇಖ್ ಉಡುಪು ತೊಡಿಸಿದ್ದು, ಖುಷಿಯಿಂದಲೇ ಉಡುಪು ತೊಟ್ಟು ಸಿದ್ದರಾಮಯ್ಯ ಆನಂದಿಸಿದರು.
ರಾಜಕಾರಣಿಗಳು ತಮ್ಮ ಬೆಂಬಲಿಗರ, ಅನುಯಾಯಿಗಳ ಒತ್ತಾಯಕ್ಕೆ ಮಣಿದು ಆಯಾ ಪ್ರದೇಶ, ಸಂಪ್ರದಾಯಗಳಿಗೆ ತಕ್ಕಂತೆ ವೇಷಭೂಷಣಗಳಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಬಹುತೇಕ ಎಲ್ಲ ಪಕ್ಷಗಳ ನಾಯಕರೂ ಹೀಗೆ ಒಂದಲ್ಲೊಂದು ಸಲ ಕಾಣಿಸಿಕೊಂಡಿರುತ್ತಾರೆ. ಅಂಥದ್ದೇ ಒಂದು ಸಂದರ್ಭ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎದುರಾಗಿತ್ತು.