ಮಂಡ್ಯ: ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಜನ ಗೆಲ್ಲಿಸಿ ಸಿಎಂ ಮಾಡುತ್ತಾರೆ. ಚುನಾವಣೆ ಯಾವಾಗ ಬೇಕಾದರೂ ಬರಬಹುದು ಎಂದು ಮಾಜಿ ಸಚಿವ ಜಮೀರ್ ಅಹಮದ್ ಭವಿಷ್ಯ ನುಡಿದರು.
ಮುಂದಿನ ಚುನಾವಣೆಯಲ್ಲಿ ಗೆದ್ದು ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಾರೆ: ಜಮೀರ್ ಅಹಮದ್ ಭವಿಷ್ಯ - ಮಾಜಿ ಸಚಿವ ಜಮೀರ್ ಅಹಮದ್ ಭವಿಷ್ಯ
ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಜನ ಗೆಲ್ಲಿಸಿ ಸಿಎಂ ಮಾಡುತ್ತಾರೆ. ಚುನಾವಣೆ ಯಾವಾಗ ಬೇಕಾದರೂ ಬರಬಹುದು ಎಂದು ಮಾಜಿ ಸಚಿವ ಜಮೀರ್ ಅಹಮದ್ ಭವಿಷ್ಯ ನುಡಿದರು.
ಜಮೀರ್ ಅಹಮದ್
ಮಂಡ್ಯದಲ್ಲಿ ಮುಸ್ಲಿಂ ಮುಖಂಡರ ಸಭೆ ಮಾಡಿದ ಅವರು, ಕೆ.ಆರ್.ಪೇಟೆ ಉಪ ಚುನಾವಣೆ ಸಂಬಂಧ ಚರ್ಚೆ ಮಾಡಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿ, ಬಿಜೆಪಿ ಉಪ ಚುನಾವಣೆಯಲ್ಲಿ 3 ರಿಂದ 4 ಸ್ಥಾನ ಗೆಲ್ಲಬಹುದು. ಸರ್ಕಾರ ಯಾವಾಗ ಬೀಳುತ್ತೋ ಗೊತ್ತಿಲ್ಲ. ಮುಂದೆ ಸಿದ್ದರಾಮಯ್ಯ ಅವರನ್ನ ಜನತೆ ಆಯ್ಕೆ ಮಾಡುತ್ತಾರೆ ಎಂದರು.
ಸುಮಲತಾ ಬಿಜೆಪಿಯಿಂದ ಗೆದ್ದಿಲ್ಲ, ಅಂಬರೀಶ್ ಅವರ ಹೆಸರಿನಿಂದ ಗೆದ್ದಿದ್ದಾರೆ. ಅವರು ಸುಮ್ಮನೆ ಇದ್ದರೆ ಬಿಜೆಪಿಗೆ ಬೆಂಬಲ ನೀಡಿದಂತೆ ಆಗುತ್ತದೆ. ಮೌನ ಮುರಿದು ಹೊರ ಬರಬೇಕು ಎಂದು ಮನವಿ ಮಾಡಿದರು.