ಮಂಡ್ಯ: 'ಹಿಂದಿ ಎಂದಿಗೂ ರಾಷ್ಟ್ರ ಭಾಷೆಯಾಗಲ್ಲ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡ ಭಾಷಾಭಿಮಾನದ ಬಗ್ಗೆ ಮಾತಾಡಿದ್ದಾರೆ.
ಕನ್ನಡವನ್ನು ಪಕ್ಕಕ್ಕೆ ತಳ್ಳಿ ಹಿಂದಿ ಭಾಷೆ ಹೇರಲು ಸಾಧ್ಯವಿಲ್ಲ: ಸಿದ್ದು ಗುಡುಗು - ಡಾ.ಹಾಮಾನಾ ಪ್ರಶಸ್ತಿ ಪ್ರಧಾನ ಸಮಾರಂಭ
ಮಂಡ್ಯದಲ್ಲಿ ಡಾ. ಹಾಮಾನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹಿಂದಿ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಮಾತ್ರ ಇದೆ. ಇನ್ನುಳಿದ ರಾಜ್ಯಗಳಲ್ಲಿ ಹಿಂದಿ ಭಾಷೆ ಇಲ್ಲ ಎಂದು ಹೇಳಿದರು.
![ಕನ್ನಡವನ್ನು ಪಕ್ಕಕ್ಕೆ ತಳ್ಳಿ ಹಿಂದಿ ಭಾಷೆ ಹೇರಲು ಸಾಧ್ಯವಿಲ್ಲ: ಸಿದ್ದು ಗುಡುಗು Siddaramaiah talk about](https://etvbharatimages.akamaized.net/etvbharat/prod-images/768-512-10614770-44-10614770-1613224477858.jpg)
ಸಿದ್ದು ಗುಡುಗು
ಸಿದ್ದು ಗುಡುಗು
ಮಂಡ್ಯದಲ್ಲಿ ಡಾ. ಹಾಮಾನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಮಾತ್ರ ಇದೆ. ಇನ್ನುಳಿದ ರಾಜ್ಯಗಳಲ್ಲಿ ಹಿಂದಿ ಭಾಷೆ ಇಲ್ಲ ಎಂದು ಹೇಳಿದರು.
ಎಲ್ಲಾ ಭಾಷೆ, ಸಂಸ್ಕೃತಿ, ಜನಾಂಗ, ಆಚಾರವನ್ನು ಹೊಂದಿದವರು ಇದ್ದಾರೆ. ಈ ಹಿಂದಿ ಹೇರಿಕೆಯ ಕನಸನ್ನು ಕೇಂದ್ರ ಸರ್ಕಾರ ಬಿಡಬೇಕು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದೆ. ಹಿಂದಿ ಹೇರಿಕೆ ಮಾಡಿದರೆ ರಕ್ತಪಾತವಾಗುತ್ತೆ ಎಂದು ಮಂಡ್ಯದಲ್ಲಿ ಸಿದ್ದರಾಮಯ್ಯ ತಮ್ಮ ಕನ್ನಡ ಭಾಷಾಭಿಮಾನವನ್ನು ಬಿಚ್ಚಿಟ್ಟರು.