ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಉತ್ತಮ ಆಡಳಿತಗಾರ: ಮಾಜಿ ಸಿಎಂ ಪರ ರಮೇಶ್ ಬಂಡಿಸಿದ್ದೇಗೌಡ ಬ್ಯಾಟಿಂಗ್​ - undefined

ಮಾಜಿ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್​​ ಬೀಸಿರುವ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಮೈತ್ರಿ ಪಕ್ಷ ಜೆಡಿಎಸ್​ ವಿರುದ್ಧ ಆಸಮಾಧಾನ ಹೊರಹಾಕಿದ್ದಾರೆ. ಇದೇ ವೇಳೆ ಸಿದ್ದರಾಮಯಯ್ಯ ಮತ್ತೆ ಸಿಎಂ ಆಗಬೇಕೆಂದಿರುವ ಅವರು, ನಾಳೆಯೇ ಸಿಎಂ ಮಾಡಿ ಅಂತಾ ಹೇಳಿಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಬೇಕು.. ನಾಳೆಯೇ ಸಿಎಂ ಮಾಡಿ ಎಂದಿಲ್ಲ: ರಮೇಶ್ ಬಂಡಿಸಿದ್ದೇಗೌಡ

By

Published : May 9, 2019, 2:38 PM IST

ಮಂಡ್ಯ:ಸಿದ್ದರಾಮಯ್ಯ ಓರ್ವ ಉತ್ತಮ ಆಡಳಿತಗಾರ. ಹಲವು ಯೋಜನೆಗಳ ಮೂಲಕ ಜನರ ಮನ ಗೆದ್ದಿದ್ದರು ಅನ್ನೋ ಮೂಲಕ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸಿದ್ದರಾಮಯ್ಯ ಪರ ಬ್ಯಾಟ್​ ಬೀಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಪರ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಬ್ಯಾಟಿಂಗ್​

ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ವಿಚಾರ ಕುರಿತು ಮಾತನಾಡಿದ ಅವ್ರು, ನಾವು ನಾಳೆ ಬೆಳಗ್ಗೆ ಸಿಎಂ ಮಾಡಿ ಅಂತಾ ಹೇಳಿಲ್ಲ. ನಮಗೂ ಓರ್ವ ಲೀಡರ್ ಬೇಕು, ಕಾಂಗ್ರೆಸ್ ಪಕ್ಷಕ್ಕೆ ನಾಯಕ ಬೇಕು. ಸಿದ್ದರಾಮಯ್ಯ ಜನಸಾಮಾನ್ಯರ ಮುಖ್ಯಮಂತ್ರಿಯಾಗಿ ಈಗಾಗಲೇ ಕೆಲಸ ಮಾಡಿದವರು, ಅವರು ಉತ್ತಮ ಆಡಳಿತಗಾರ. ಅನೇಕ ಯೋಜನೆಗಳ ಮೂಲಕ ಜನರ ಮನಸನ್ನು ಗೆದ್ದಿದ್ದಾರೆ ಎಂದರು.

ಸಮ್ಮಿಶ್ರ ಸರ್ಕಾರ ಬಂದ ದಿನದಿಂದಲೂ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮೈತ್ರಿ ಪಕ್ಷದ ವಿರುದ್ಧವೇ ಆರೋಪ ಮಾಡಿದ್ದಾರೆ. ಸ್ಥಳೀಯವಾಗಿ ನಡೆದ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ನಡುವೆ ಜಿದ್ದಾಜಿದ್ದಿ ನಡೆದಿದೆ. ಹೀಗಾಗಿ ಕಾಂಗ್ರೆಸ್​ ಪಕ್ಷದವರನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ರಮೇಶ್​ ಬಂಡಿಸಿದ್ದೇಗೌಡ ಆರೋಪಿಸಿದ್ದಾರೆ.

ಇನ್ನು ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರ ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ಸೂಚಿಸಿದ್ದಿರಿ ಎಂಬ ಆರೋಪ ಇದೆ ಎಂದಿದ್ದ ಪ್ರತಿಕ್ರಿಯಿಸಿದ ರಮೇಶ್​ ಅವರು, ಆಗದವರು ಏನಾದ್ರೂ ಹೇಳ್ತಾರೆ, ಮೊಸರಲ್ಲಿ ಕಲ್ಲು ಹುಡುಕುತ್ತಾರೆ. ಎಲ್ಲರ ಮಾತಿಗೂ ಆಹಾರ ಆಗೋಕೆ ಆಗುತ್ತಾ ಅಂತಾ ಪ್ರಶ್ನಿಸಿದರು.

For All Latest Updates

TAGGED:

ABOUT THE AUTHOR

...view details