ಕರ್ನಾಟಕ

karnataka

ETV Bharat / state

ಅಸೂಯೆಯಿಂದ ನನ್ನನ್ನು ಸೋಲಿಸಿದ್ರು, ನಿಮ್ಮ ರಕ್ಷಾ ಕವಚ ಇರುವವರೆಗೂ ನಾ ಜಗ್ಗಲ್ಲ.. ಸಿದ್ದರಾಮಯ್ಯ - Siddaramaiah's react about defeat in Mandya election

ಜೆಡಿಎಸ್‌ನವರು ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಬೇಕೆಂದ್ರು. ಬಿಜೆಪಿಯವರು ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಬೇಕೆಂದರು. ಎರಡು ಸಮಾಜದವರು ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಒಂದಾದರು. ಬೇರೆಯವರು ಒಂದಾಗಲಿಲ್ಲ..

siddaramaiah-outrage-against-bsy
ಸಿದ್ದರಾಮಯ್ಯ

By

Published : Feb 15, 2021, 9:48 PM IST

ಮಂಡ್ಯ :2ನೇ ಬಾರಿ ಮುಖ್ಯಮಂತ್ರಿ ಆಗುತ್ತೇನೆಂಬ ಅಸೂಯೆಯಿಂದ ನನ್ನನ್ನು ಸೋಲಿಸದರು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ದೇವಾಲಯ ಉದ್ಘಾಟಿಸಿ ಮಾತನಾಡಿದ ಅವರು, ನಾನು ಮಾಡಿದ ಕೆಲಸಗಳನ್ನು ಜನ ಮರೆಯುವ ಹಾಗಿಲ್ಲ. ನಾನು ಅಧಿಕಾರದಲ್ಲಿದ್ದಾಗ 7 ಕೆಜಿ ಅಕ್ಕಿ ಕೊಟ್ಟೆ. ಆದ್ರೆ, ಈಗ ಯಡಿಯೂರಪ್ಪ ಅದನ್ನೂ ಕಡಿಮೆ ಮಾಡಿದ್ದಾರೆ ಎಂದರು.

ನಾನು ನಮ್ಮಪ್ಪನ ಮನೆಯಿಂದ ಕೊಟ್ಟಿಲ್ಲ. ಯಡಿಯೂರಪ್ಪನೂ ಅವರ ಅಪ್ಪನ ಮನೆಯಿಂದ ಕೊಡುತ್ತಿಲ್ಲ. ಬಿಎಸ್​ವೈ ಅಧಿಕಾರಕ್ಕೆ ಬಂದ ಮೇಲೆ ನನ್ನ ಎಲ್ಲಾ ಕಾರ್ಯಕ್ರಮ ನಿಲ್ಲಿಸುತ್ತಿದ್ದಾರೆ. ಮಾತು ಎತ್ತಿದ್ರೆ ರೈತನ ಮಗ ಅಂತಾರೆ. ಪ್ರಮಾಣ ವಚನ ಸ್ವೀಕರಿಸುವಾಗ ಹಸಿರು ಶಾಲು ಹಾಕಿಕೊಳ್ಳೋದು, ರೈತರಿಗೆ ಅವಮಾನ ಮಾಡೋದು ಎಂದು ಕಿಡಿಕಾರಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿರುವುದು..

ನಾನು ಮಾಡಿರುವ ಎಲ್ಲಾ ಯೋಜನೆಗಳನ್ನು ನಿಲ್ಲಿಸುತ್ತಿದ್ದಾರೆ. ನಾವು ಮಾಡಿದ ಎಲ್ಲ ಕೆಲಸಗಳು ಹೊಳೆಯಲ್ಲಿ ಹುಣೆಸೆಹಣ್ಣು ತೇದ ಹಾಗಾಯ್ತು. ನಾನು ಜಾತಿ ರಾಜಕೀಯ ಮಾಡಲ್ಲ ಎಂದರು.

ಓದಿ:ಪರಿಸರವಾದಿ ದಿಶಾ ರವಿ ಬಿಡುಗಡೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ

ಜೆಡಿಎಸ್ ಅವರು ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಬೇಕು ಅಂದ್ರು. ಆದ್ರೆ, ಬಿಜೆಪಿ ಅವರು ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಬೇಕು ಎಂದರು. ಎರಡು ಸಮಾಜದವರು ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಒಂದಾದರು. ಬೇರೆಯವರು ಒಂದಾಗಲಿಲ್ಲ. ಇದಕ್ಕಾಗಿ ನಾನು ಸೋತು ಬಿಟ್ಟೆ. ಆದರೆ, ನಿಮ್ಮ ರಕ್ಷಾ ಕವಚ ಇರುವವರೆಗೆ ನಾನು ಜಗ್ಗಲ್ಲ ಎಂದರು.

ABOUT THE AUTHOR

...view details