ಮೈಸೂರು/ಮಂಡ್ಯ: Habitual offenders ಅಂದರೆ ಏನು ಗೊತ್ತಾ ಎಂದು ಇನ್ಸ್ಪೆಕ್ಟರ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡ ಪ್ರಸಂಗ ನಡೆದಿದೆ.
ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರಂ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆಲನಹಳ್ಳಿ ಠಾಣೆ ಇನ್ಸ್ಪೆಕ್ಟರ್ಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ ಸುಸ್ತು ಮಾಡಿದ್ದಾರೆ.
Habitual offenders ಅಂದ್ರೆ ಏನು ಅಂತ ಗೊತ್ತಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಇನ್ಸ್ಪೆಕ್ಟರ್ ರವಿಶಂಕರ್ಗೆ ಪ್ರಶ್ನೆ ಮಾಡಿದಾಗ ಅವರು ಡಿಸಿಪಿ ಕಡೆ ನೋಡಿದರು. ಮತ್ತೆ ಪ್ರಶ್ನೆ ಮಾಡಿದ ಸಿದ್ದರಾಮಯ್ಯ ಅಲ್ಲಿ ಏನ್ ನೋಡ್ತಿರಾ, ಗೊತ್ತಿಲ್ಲ ಅಂದ್ರೆ ಅಧಿಕಾರಿಗಳ ಬಳಿ ಕೇಳಿ ತಿಳ್ಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡರು.
ಘಟನೆ ನಡೆದ ಸ್ಥಳದಿಂದ ರಸ್ತೆಗೆ, ಎಷ್ಟು ಕಿಲೋಮೀಟರ್ ಇದೆ. ಒಂದೂವರೆ ಕಿಲೋಮೀಟರ್? ಇನ್ನು ಅದೆಲ್ಲ ಅಳತೆ ಮಾಡಿಲ್ವ? ಕೋರ್ಟ್ನಲ್ಲಿ ಕೇಳಿದರೆ ಏನು ಹೇಳ್ತಿಯಯ್ಯ? ಎಂದು ಇನ್ಸ್ಪೆಕ್ಟರ್ ರವಿಶಂಕರ್ಗೆ ಕ್ಲಾಸ್ ತೆಗೆದುಕೊಂಡರು. ನೀವೆಲ್ಲ ಇದನ್ನೆಲ್ಲ ಹೇಳಿಕೊಟ್ಟಿಲ್ವ ಎಂದು ಡಿಸಿಪಿ ಪ್ರದೀಪ್ ಗುಂಟೆ ಅವರ ಬಳಿ ಅಸಮಾಧಾನ ವ್ಯಕ್ತಪಡಿಸಿದರು.