ಮಂಡ್ಯ:ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಬೈಕ್ ಸವಾರರಿಗೆ ಇಲೊಬ್ಬ ಪೊಲೀಸ್ ಅಧಿಕಾರಿ ಮಾದರಿ ಶಿಕ್ಷೆ ಕೊಟ್ಟಿದ್ದಾರೆ. ಎಷ್ಟು ಹೇಳಿದರೂ ಕೇಳದ ಜನರನ್ನು ದ್ವಿಚಕ್ರ ವಾಹನ ತಡೆದು ನಿಲ್ಲಿಸಿದ ಪೊಲೀಸ್ ಅಧಿಕಾರಿ ಕೆರೆ ಏರಿ ಸ್ವಚ್ಛಗೊಳಿಸುವಂತೆ ತಾಕೀತು ಮಾಡಿದ್ದಾರೆ. ನಿಯಮ ಮೀರಿ ವರ್ತಿಸಿದ ಜನರು ಬೇರೆ ದಾರಿ ಕಾಣದೆ ಕೆರೆ ಸುತ್ತಮುತ್ತ ಸ್ವಚ್ಛಗೊಳಿಸಲೇ ಬೇಕಾಯ್ತು.
ಅನವಶ್ಯಕವಾಗಿ ಬೈಕ್‌ನಲ್ಲಿ ಸಂಚಾರಿಸುತ್ತಿದ್ದವರಿಗೆ ಈ ಮೂಲಕ ಪೊಲೀಸ್ ಅಧಿಕಾರಿ ಮಾದರಿ ಶಿಕ್ಷೆ ನೀಡಿದರು.