ಮಂಡ್ಯ: ಇತಿಹಾಸ ಪ್ರಸಿದ್ಧ ಸೋಮನಹಳ್ಳಮ್ಮನ ಜಾತ್ರೆ ಅಂಗವಾಗಿ ನಾಗಮಂಗಲ ತಾಲೂಕಿನ ಹೊಣಕೆರೆ ಹಾಗೂ ಚಿಣ್ಯ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿ ಶ್ರಮದಾನ ಮಾಡಿದರು.
ಜನಪ್ರತಿನಿಧಿಗಳಿಂದ ಸ್ವಚ್ಛತಾ ಕಾರ್ಯ : 100ಕ್ಕೂ ಹೆಚ್ಚು ಮಂದಿ ಶ್ರಮದಾನದಲ್ಲಿ ಭಾಗಿ - Shramadana from gram panchayath president and members
ನಾಗಮಂಗಲ ತಾಲೂಕಿನ ಸೋಮನಹಳ್ಳಿ ಜಾತ್ರಾ ಮಹೋತ್ಸವದ ಅಂಗವಾಗಿ ಸ್ವಚ್ಛತಾ ಕಾರ್ಯ ಮಾಡಿದ್ದು, ಚಿಣ್ಯ ಹಾಗೂ ಹೊಣಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಕುಡುಗೋಲು, ಗುದ್ದಲಿ ಹಿಡಿದು ಸೋಮನಹಳ್ಳಿ ಕೆರೆ ಏರಿ ಸ್ವಚ್ಚಗೊಳಿಸಿದರು..
ಸೋಮನಹಳ್ಳಿ ಜಾತ್ರಾ ಮಹೋತ್ಸವದ ಅಂಗವಾಗಿ ಸ್ವಚ್ಛತಾ ಕಾರ್ಯ
ನಾಗಮಂಗಲ ತಾಲೂಕಿನ ಸೋಮನಹಳ್ಳಿ ಜಾತ್ರಾ ಮಹೋತ್ಸವದ ಅಂಗವಾಗಿ ಸ್ವಚ್ಛತಾ ಕಾರ್ಯ ಮಾಡಿದ್ದು, ಚಿಣ್ಯ ಹಾಗೂ ಹೊಣಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಕುಡುಗೋಲು, ಗುದ್ದಲಿ ಹಿಡಿದು ಸೋಮನಹಳ್ಳಿ ಕೆರೆ ಏರಿ ಸ್ವಚ್ಚಗೊಳಿಸಿದರು.
ಹೊಣಕೆರೆ ಗ್ರಾಪಂ ಅಧ್ಯಕ್ಷ ರಾಜಕುಮಾರ್ ಮತ್ತು ತಾಲೂಕು ಪಂಚಾಯತ್ ಸದಸ್ಯ ಕೃಷ್ಣೇಗೌಡ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ಮಾಡಿದ್ದು, ಯಾವುದೇ ಅನುದಾನ ಬಳಕೆ ಮಾಡಿಕೊಳ್ಳದೆ ಸುಮಾರು 1 ಕಿ.ಮೀ ಉದ್ದದ ಕರೆ ಏರಿಯನ್ನು ಕ್ಲೀನ್ ಮಾಡಲಾಗಿದೆ. 100ಕ್ಕೂ ಹೆಚ್ಚು ಜನರು ಶ್ರಮದಾನದಲ್ಲಿ ಭಾಗಿಯಾಗಿದ್ದರು.