ಕರ್ನಾಟಕ

karnataka

ETV Bharat / state

ಗೌರಮ್ಮನ ಹಾಗಿದ್ದವಳು ಈಗ ಬಂದೌಳೆ... ಸುಮಲತಾರನ್ನು ಏಕ ವಚನದಲ್ಲಿ ಟೀಕಿಸಿದ ಶಿವರಾಮೇಗೌಡ - ಅಂಬರೀಶ್

ದರ್ಶನ್ ಬಂದವನಲ್ಲ ಅವನೂ ನಾಯ್ಡು, ಸುಮಲತಾ ನಾಯ್ಡು, ರಾಕ್ ಲೈನ್​ ವೆಂಕಟೇಶ್​ ಕೂಡ ನಾಯ್ಡು. ಮಂಡ್ಯವನ್ನು ನಾಯ್ಡುಗಳ ಮಯವಾಗಿ ಮಾಡಲು ಬಿಡಬಾರದು ಎಂದು ಸಂಸದ ಎಲ್​.ಆರ್​. ಶಿವರಾಮೇಗೌಡ ಟೀಕಿಸಿದರು.

ಶಿವರಾಮೇಗೌಡ

By

Published : Apr 2, 2019, 11:52 AM IST

ಮಂಡ್ಯ: ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಜಾತಿ ಕೆಣಕಿದ್ದ ಸಂಸದ ಎಲ್​.ಆರ್​. ಶಿವರಾಮೇಗೌಡ ಈಗ ಮತ್ತೆ ನಾಲಿಗೆ ಹರಿಬಿಟ್ಟಿದ್ದು, ಆಗ ಗೌರಮ್ಮನ ಹಾಗೆ ಮನೆಯಲ್ಲಿದ್ದು, ಈಗ ಬಂದವಳೆ ಈಯಮ್ಮ ಎನ್ನುವ ಮೂಲಕ ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.

ಮದ್ದೂರು ತಾಲೂಕಿನ ಕೊಪ್ಪದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಅಂಬರೀಶ್ ವಸತಿ ಸಚಿವರಾಗಿದ್ದಾಗ ಬಡವರಿಗೆ ಯಾಕ್ ಮನೆ ಕೊಡಿಸ್ಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಸುಮಲತಾರನ್ನು ಏಕ ವಚನದಲ್ಲಿ ಟೀಕಿಸಿದ ಶಿವರಾಮೇಗೌಡ

ಅವನಾರೋ ರಾಕ್​ಲೈನ್ ಅಂತೆ.ಆಮೇಲೆ ಅವರನ್ನ ನೋಡಲು ಗಾಂಧಿನಗರಕ್ಕೆ ಹೋಗಬೇಕಾಗುತ್ತೆ. ಹುಡಕಲು ನೀವೆಲ್ಲಾ ಅಲ್ಲಿಗೆ ಹೋಗ್ತಿರಾ ಹೇಳಿ ಎಂದು ಪ್ರಶ್ನೆ ಮಾಡಿದರು. ಈ ಟೂರಿಂಗ್ ಟಾಕೀಸ್ ಅವರನ್ನ ಹದಿನೆಂಟನೆ ತಾರೀಖು ಪ್ಯಾಕ್ ಮಾಡಿಸಿ ಕಳಿಸಬೇಕು. ಶೂಟಿಂಗ್ ಮಾಡಿದ ಸಿನಿಮಾ ಎಲ್ಲವೂ ಬಿಡುಗಡೆ ಆಗಲ್ಲ. ಹಾಗೆಯೇ ಇದು ಎಂದು ವಾಗ್ದಾಳಿ ನಡೆಸಿದರು.

ಇವತ್ತು ದರ್ಶನ್ ಬಂದವನಲ್ಲ ಅವನೂ ನಾಯ್ಡು, ಸುಮಲತಾ ನಾಯ್ಡು, ರಾಕ್ ಲೈನ್​ ವೆಂಕಟೇಶ್​ ಕೂಡ ನಾಯ್ಡು. ಮಂಡ್ಯವನ್ನು ನಾಯ್ಡುಗಳ ಮಯವಾಗಿ ಮಾಡಲು ಬಿಡಬಾರದು. ಅಂಬರೀಶ್​ ನಂಬಿಕೊಂಡೆ 20 ವರ್ಷ ಹಾಳು ಮಾಡ್ಕೊಂಡೆ ನಾನು. 20 ವರ್ಷ ಅಧಿಕಾರ ವಂಚಿತರಾಗಿ ಕೂರಲು ಈ ಪುಣ್ಯಾತ್ಮನ ಪಾರ್ಟಿಗೆ ಕರೆತಂದದ್ದೇ ಕಾರಣ ಎಂದರು.

ABOUT THE AUTHOR

...view details