ಮಂಡ್ಯ:ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಮಾಯಾಂಗನೆಯಂತೆ ವರ್ತಿಸುತ್ತಿದ್ದಾರೆ. ಜಯಲಲಿತಾರನ್ನು ಅವರು ಮೀರಿಸ್ತಾರೆ ಎನ್ನುವ ಮೂಲಕ ಮಂಡ್ಯ ಸಂಸದ ಶಿವರಾಮೇಗೌಡ, ಸುಮಲತಾ ವಿರುದ್ಧ ಮತ್ತೆ ವಾಗ್ದಾಳಿ ಮಾಡಿದರು.
ನಾಗಮಂಗಲದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಟೂರಿಂಗ್ ಟಾಕೀಸ್ 18ರ ನಂತರ ಪ್ಯಾಕ್ ಮಾಡಿಕೊಂಡು ಹೋಗುತ್ತೆ. ಆಮೇಲೆ ನಾವೇ ನಿಮಗೆ ಆಗಬೇಕು ಎಂದು ಹೇಳಿದರು.