ಮಂಡ್ಯ: ಮದ್ದೂರಿನ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಶ್ರಾವಣ ಶನಿವಾರದ ಹಿನ್ನೆಲೆ ವಿಶೇಷ ಪೂಜೆ ಸಲ್ಲಿಸಿ ನಂತರ ಮದ್ದೂರಿನ ಪ್ರಸಿದ್ಧ ದೇವಾಲಯ ಉಗ್ರನರಸಿಂಹ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರಿಗೆ ಸ್ಥಾನಮಾನ ಕೊಟ್ಟಿದ್ದಾರೆ. ಕೆಳಮನೆಯಲ್ಲಿ ನಾವು ಜನರಿಂದ ಆಯ್ಕೆಯಾಗಿದ್ದೇವೆ. ಅವರನ್ನ ವಿಧಾನ ಪರಿಷತ್ನಲ್ಲಿ ಆಯ್ಕೆ ಮಾಡಿ ಸ್ಥಾನಮಾನ ನೀಡಿದ್ದಾರೆ. ಅದರಲ್ಲಿ ವಿಶ್ವನಾಥ್, ಯೋಗೇಶ್ವರ್ ನಾಮೀನೇಟ್ ಆಗಿ ಹೋಗಿದ್ದಾರೆ ಎಂದು ಪರೋಕ್ಷವಾಗಿ ಎಂ.ಟಿ.ಬಿ ನಾಗರಾಜ್ ಅವರಿಗೆ ಟಾಂಗ್ ನೀಡಿದರು.