ಕರ್ನಾಟಕ

karnataka

ETV Bharat / state

ಶಾಲೆಯಲ್ಲಿ ಭದ್ರತಾ ಸಿಬ್ಬಂದಿ ಅನುಮಾನಾಸ್ಪದ ಸಾವು - ಎಸ್‌ಟಿಜಿ ಶಾಲೆ

ಮಾಜಿ ಸಚಿವ ಪುಟ್ಟರಾಜು ಒಡೆತನದ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭದ್ರತಾ ಸಿಬ್ಬಂದಿ ಅನುಮಾನಾಸ್ಪದವಾಗಿ ಸಾವಿಗೀಡಗಿರುವ ಘಟನೆ ಪಾಂಡವಪುರ ತಾಲೂಕಿನ ಚಿನಕುರುಳಿ ಬಳಿಯಲ್ಲಿರುವ ಎಸ್‌ಟಿಜಿ ಶಾಲೆಯಲ್ಲಿ ನಡೆದಿದೆ.

Security guard died

By

Published : Sep 19, 2019, 11:44 AM IST

ಮಂಡ್ಯ:ಮಾಜಿ ಸಚಿವ ಪುಟ್ಟರಾಜು ಒಡೆತನದ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭದ್ರತಾ ಸಿಬ್ಬಂದಿ ಅನುಮಾನಾಸ್ಪದವಾಗಿ ಸಾವಿಗೀಡಗಿರುವ ಘಟನೆ ಪಾಂಡವಪುರ ತಾಲೂಕಿನ ಚಿನಕುರುಳಿ ಬಳಿಯಲ್ಲಿರುವ ಎಸ್‌ಟಿಜಿ ಶಾಲೆಯಲ್ಲಿ ನಡೆದಿದೆ.

ಬೇಬಿ ಗ್ರಾಮದ ಶಿವಣ್ಣ (46) ಮೃತ ಸಿಬ್ಬಂದಿ. ನಿನ್ನೆ ರಾತ್ರಿ ಕೆಲಸಕ್ಕೆಂದು ಹೋಗಿದ್ದ ವೇಳೆ ಮೃತಪಟ್ಟಿದ್ದು, ಇಂದು ಬೆಳಗ್ಗೆ ಶಾಲೆಯ ಹಿಂಭಾಗದಲ್ಲಿರುವ ಜನರೇಟರ್ ವಾಹನದ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಪಾಂಡವಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details