ಗ್ರಾಪಂ ಚುನಾವಣೆ : ಮಂಡ್ಯದಲ್ಲಿ ಶಾಂತಿಯುತ ಮತದಾನ - ಮಂಡ್ಯದಲ್ಲಿ ಶಾಂತಿಯುತ ಮತದಾನ
ಇಂದು 2ನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಮಂಡ್ಯದಲ್ಲಿ ಶಾಂತಿಯುತವಾಗಿ ನಡೆಯುತ್ತಿದೆ. ಜಿಲ್ಲೆಯ ಮೂರು ತಾಲೂಕುಗಳಲ್ಲಿ ಇಂದು ಚುನಾವಣೆ ನಡೆಯುತ್ತಿದೆ..
![ಗ್ರಾಪಂ ಚುನಾವಣೆ : ಮಂಡ್ಯದಲ್ಲಿ ಶಾಂತಿಯುತ ಮತದಾನ second phase of gram panchayath election in mandya](https://etvbharatimages.akamaized.net/etvbharat/prod-images/768-512-10021124-thumbnail-3x2-mandya.jpg)
ಎರಡನೇ ಹಂತ ಮತದಾನ
ಮಂಡ್ಯ: ಜಿಲ್ಲೆಯ ನಾಲ್ಕು ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆಯ ಎರಡನೇ ಹಂತದ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ.
ಎರಡನೇ ಹಂತ ಮತದಾನ
ಈಗಾಗಲೇ ಶಾಂತಿಯುತ ಮತದಾನಕ್ಕೆ ಪೊಲೀಸ್ ಇಲಾಖೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೂರು ತಾಲೂಕಿನ 5,81,306 ಜನರಿಂದ ಇಂದು ಹಕ್ಕು ಚಲಾವಣೆಯಾಗಲಿದೆ. ಇನ್ನು, ಮತಗಟ್ಟೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮತದಾರರಿಗೆ ಸ್ಯಾನಿಟೈಸರ್ ವಿತರಣೆ, ಸ್ಕ್ರೀನಿಂಗ್ ಮಾಡಲಾಗುತ್ತಿದೆ.