ಕರ್ನಾಟಕ

karnataka

ETV Bharat / state

ಮಂಡ್ಯ: ಎರಡನೇಯ ದಿನದ ಕುಂಭಮೇಳಕ್ಕೆ ಚಾಲನೆ ನೀಡಿದ ಡಾ.ವಿರೇಂದ್ರ ಹೆಗ್ಗಡೆ

ಮಂಡ್ಯದಲ್ಲಿ ನಡೆಯುತ್ತಿರುವ ಕುಂಭಮೇಳದ ಎರಡನೆ ದಿನಕ್ಕೆ ಡಾ. ವಿರೇಂದ್ರ ಹೆಗ್ಗಡೆಯವರು ಚಾಲನೆ ನೀಡಿದರು.

Mnd_15_01_
ಕುಂಭಮೇಳಕ್ಕೆ ಚಾಲನೆ ನೀಡಿದ ಡಾ.ವಿರೇಂದ್ರ ಹೆಗಡೆ

By

Published : Oct 15, 2022, 8:03 PM IST

Updated : Oct 15, 2022, 9:00 PM IST

ಮಂಡ್ಯ:ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ನಡೆಯುತ್ತಿರುವ ಕುಂಭಮೇಳದ ಎರಡನೆ ದಿನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭೆ ಸದಸ್ಯರಾಗಿರುವ ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಿದರು.

ಬಳಿಕ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ಧಾರ್ಮಿಕ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಹಾ ಕುಂಭಮೇಳವನ್ನು ವೀಕ್ಷಿಸಲು ಬೇರೆ ಬೇರೆ ರಾಜ್ಯಗಳಿಗೆ ಹೋಗುವಂತಹ ಪರಿಸ್ಥಿತಿ ಎದುರಾಗಿತ್ತು. ಆದರೆ, ಇಂದು ದಕ್ಷಿಣ ಭಾರತದ ಅಂಬಿಗರ ಹಳ್ಳಿಯ ಪುಣ್ಯ ಸ್ಥಳವಾದ ಕಾವೇರಿ, ಲಕ್ಷ್ಮಣ, ತೀರ್ಥ, ಹೇಮಾವತಿ ಮೂರು ನದಿಗಳು ಸೇರುವ ತ್ರಿವೇಣಿ ಸಂಗಮದಲ್ಲಿ ಮಹಾ ಕುಂಭಮೇಳವನ್ನು ಆಚರಣೆ ಮಾಡುತ್ತಿದ್ದೇವೆ. ಇದಕ್ಕೆಲ್ಲಾ ಸ್ಫೂರ್ತಿ ಮಲೆಮಹದೇಶ್ವರ ಸ್ವಾಮಿ ಎಂದರು.

ಕುಂಭಮೇಳ ವೇದಿಕೆ

ಮನುಷ್ಯ ಆನಂದವಾಗಿ ಇರಬೇಕಾದರೆ ಮನಸ್ಸು ನಿರ್ಮಲವಾಗಿರಬೇಕು. ಮನಸ್ಸು ನಿರ್ಮಲವಾಗಿದ್ದರೆ ಮಾತ್ರ ಆನಂದವಾಗಿರಲು ಸಾಧ್ಯ. ನದಿಗಳ ಬಗ್ಗೆ ಶ್ರದ್ಧೆ ಇರಬೇಕು. ನದಿಗಳನ್ನು ನಾವು ರಕ್ಷಣೆ ಮಾಡಿದರೆ ನದಿಗಳು ನಮ್ಮನ್ನು ಉಳಿಸುತ್ತದೆ ಎಂದರು. ಭಾರತದಲ್ಲಿ ಧರ್ಮ ಕೆಲಸವನ್ನು ಮಾಡುತ್ತದೆ. ಜನರಿಗೆ ವಿಚಾರವನ್ನು ಹೇಳಿದರೆ ತಿಳಿದುಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಭಾವನಾತ್ಮಕ ಸಂಬಂಧ ನಮ್ಮ ದೇಶದ ಜೊತೆಗಿದೆ. ಈ ಕಾರಣಕ್ಕಾಗಿ ಕುಂಭಮೇಳವನ್ನು ಆಚರಣೆ ಮಾಡಿ ಪುಣ್ಯ ಸ್ನಾನವನ್ನು ಮಾಡುತ್ತೇವೆ ಎಂದು ತಿಳಿಸಿದರು.

ಇನ್ನು ಮೈಸೂರಿಗೆ ಬರುವಂತಹ ಪ್ರವಾಸಿಗರು ತ್ರಿವೇಣಿ ಸಂಗಮಕ್ಕೂ ಭೇಟಿ ನೀಡಬೇಕು ತ್ರಿವೇಣಿ ಸಂಗಮ ಅಭಿವೃದ್ಧಿಯ ಜೊತೆಗೆ ಭಾವನಾತ್ಮಕ ಸಂಬಂಧವನ್ನು ಬೆಸೆಯಬೇಕು. ಬಹಳಷ್ಟು ಕ್ಷೇತ್ರಗಳು ಇಂದು ಅಭಿವೃದ್ಧಿಯನ್ನು ಹೊಂದಿದೆ ಎಂಬುದಕ್ಕೆ ಪ್ರವಾಸಿಗರೇ ಮೂಲ ಕಾರಣ ಎಂದು ಹೇಳಿದರು. ಇದಕ್ಕಾಗಿ ಜಗದ್ಗುರುಗಳಾದ ಡಾ.ನಿರ್ಮಲಾನಂದನಾಥ ಮಹಾಸ್ವಾಮಿ ಅವರು ಹಾಗೂ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಯವರು ಮುಖ್ಯಮಂತ್ರಿಯವರ ಜೊತೆ ಮಾತನಾಡಿ, ಮೈಸೂರಿಗೆ ಬರುವಂತಹ ಪ್ರವಾಸಿಗರು ಮೂರು ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಪುಣ್ಯಸ್ನಾನವನ್ನು ಮಾಡುವ ರೀತಿ ಅಭಿವೃದ್ಧಿ ಪಡಿಸಬೇಕು ಎಂದು ಕರೆ ನೀಡಿದರು.

ಕುಂಭಮೇಳದಲ್ಲಿ ಭಾಗಿಯಾದ ಜನರು

ಬಳಿಕ ಎಡತೊರೆ ಯೋಗಾನಂದೇಶ್ವರ ಮಠದ ಶಂಕರಭಾರತಿ ಸ್ವಾಮೀಜಿ ಅವರು ಮಾತನಾಡಿ, ತ್ರಿವೇಣಿ ಸಂಗಮ, ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣ ತೀರ್ಥದ ಪುಣ್ಯ ಸಂಗಮ ಕ್ಷೇತ್ರವಾಗಿದೆ. ಜಗದ್ಗುರು ಮಹದೇಶ್ವರರು ಪಾದಾರ್ಪಣೆ ಮಾಡಿ ಪವಿತ್ರವಾಗಿರುವ ಪುಣ್ಯ ಭೂಮಿಯಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಮಹಾಕುಂಭಮೇಳ ಧಾರ್ಮಿಕ ಸಭೆಯ ಹಿರಿಯ ಸಾನಿಧ್ಯವನ್ನು ವಹಿಸಿರುವಂತಹ ಕಾವೇರಿ ನದಿ ದಕ್ಷಿಣ ಭಾರತದಲ್ಲಿ ಹರಿಯುವ ಜೀವನದಿ. ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ ಸಪ್ತ ನದಿಗಳಲ್ಲಿ ಕಾವೇರಿ ನದಿ ಅತ್ಯಂತ ಪವಿತ್ರವಾದಂತಹ ನದಿ.

ಕಾವೇರಿನದಿಯ ದರ್ಶನದಿಂದ ಪಾಪಗಳು ದೂರವಾಗುತ್ತವೆ ಎಂದರು. ಆನಂದದಿಂದ ಬಂದು ಸಾರ್ವಜನಿಕರು ಕುಂಭಮೇಳದಲ್ಲಿ ಪುಣ್ಯ ಸ್ನಾನವನ್ನು ಮಾಡಿ ಪುನೀತರಾಗುತ್ತಿದ್ದಾರೆ. ವಿಶೇಷ ದಿನಗಳಲ್ಲಿ ಪವಿತ್ರವಾದ ಸಂಗಮ ಕ್ಷೇತ್ರದಲ್ಲಿ ಸ್ನಾನ ಮಾಡಿ ದೇವರ ದರ್ಶನವನ್ನು ಮಾಡುವುದು ವಿಶೇಷವಾದ ಸಂಸ್ಕಾರ ಎಂದು ಬಣ್ಣಿಸಿದರು.

ಇದನ್ನೂ ಓದಿ:ಮಂಡ್ಯ ಮಹಾ ಕುಂಭಮೇಳ: ಮಹದೇಶ್ವರನ ಬೆಟ್ಟದಿಂದ ಜ್ಯೋತಿ ಯಾತ್ರೆ ಆರಂಭ

Last Updated : Oct 15, 2022, 9:00 PM IST

ABOUT THE AUTHOR

...view details