ಮಂಡ್ಯ: ತಮಿಳುನಾಡಿನ ಮಾಜಿ ಸಿಎಂ ದಿ.ಜಯಲಲಿತಾ ಆಪ್ತರಾಗಿದ್ದ ಶಶಿಕಲಾ ನಟರಾಜನ್ ನಿನ್ನೆ ಮಂಡ್ಯ ಜಿಲ್ಲೆಯ ಕೆಲವು ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ತಾವು ಕಟ್ಟಿಕೊಂಡಿದ್ದ ಹರಕೆ ತೀರಿಸಿದರು.
ಕುಟುಂಬ ಸಮೇತರಾಗಿ ಆಗಮಿಸಿದ ಚಿನ್ನಮ್ಮ, ಮೊದಲು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಿಮಿಷಾಂಭ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಪಾಂಡವಪುರ ತಾಲೂಕಿನ ಶಕ್ತಿ ದೇವತೆ ಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಂಡ್ಯದ ನಿಮಿಷಾಂಭ ದೇವಾಲಕ್ಕೆ ಶಶಿಕಲಾ ನಟರಾಜನ್ ಭೇಟಿ ಕಳೆದ ಮೂರು ವರ್ಷಗಳ ಹಿಂದೆ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮತ್ತೆ ಬರುವುದಾಗಿ ಹರಕೆ ಕಟ್ಟಿಕೊಂಡಿದ್ದರಂತೆ. ಈ ಹಿನ್ನೆಲೆ ಜೈಲಿನಿಂದ ಬಿಡುಗಡೆಯಾದ ನಂತರ ಇದೇ ಮೊದಲ ಬಾರಿಗೆ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದರು.
ಮಂಡ್ಯದ ನಿಮಿಷಾಂಭ ದೇವಾಲಕ್ಕೆ ಶಶಿಕಲಾ ನಟರಾಜನ್ ಭೇಟಿ ದೇಗುಲಕ್ಕೆ ಬಂದ ಶಶಿಕಲಾ ಅವರನ್ನು ಆಡಳಿತ ಮಂಡಳಿಯ ಸದಸ್ಯರು ವಿಶೇಷವಾಗಿ ಸ್ವಾಗತ ಕೋರಿದರು. ಸುಮಾರು ಮುಕ್ಕಾಲು ಗಂಟೆ ನಿಮಿಷಾಂಭ ದೇಗುಲದಲ್ಲಿದ್ದ ಶಶಿಕಲಾ ನಟರಾಜನ್ ದೇವಿಗೆ ಮಡಿಲು ತುಂಬಿ, ಸೀರೆ ಉಡಿಸಿ, ಅಭಿಷೇಕ, ಅರ್ಚನೆ, ಪೂಜೆ ಸಲ್ಲಿಸಿದರು.
ಇದನ್ನೂ ಓದಿ:'ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ' ಕಾರ್ಯಕ್ರಮಕ್ಕೆ ಚಾಲನೆ