ಮಂಡ್ಯ:ನಾಳೆ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಪೊಲೀಸ್ ಕಣ್ಗಾವಲಿಂದ ಸುತ್ತುವರೆದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಮೂಡಲು ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಸಂಕೀರ್ತನ ಯಾತ್ರೆ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ದಾರಿ ಉದ್ದಕ್ಕೂ ಸಿಸಿಟಿವಿ ಅಳವಡಿಕೆ ಮಾಡುವುದರೊಂದಿಗೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ: ಪೊಲೀಸರಿಂದ ಸುತ್ತುವರೆದ ಶ್ರೀರಂಗಪಟ್ಟಣ
ಈ ಯಾತ್ರೆಯು ಶ್ರೀರಂಗಪಟ್ಟಣದಲ್ಲಿರುವ ನಿಮಿಷಾಂಬ ದೇವಸ್ಥಾನದ ಬಳಿಯಿಂದ ಹೊರಟು ಪೇಟೆ ಬೀದಿಯ ಮಾರ್ಗವಾಗಿ ಜಾಮಿಯಾ ಮಸೀದಿ ಸುತ್ತ ಮೆರವಣಿಗೆ ನಡೆಯುವುದರಿಂದ ಈಗಾಗಲೇ ಮಸೀದಿಗೆ ಬ್ಯಾರಿಕೇಡ್ ಅಳವಡಿಸಿ ಭದ್ರತೆ ಒದಗಿಸಲಾಗಿದೆ.
ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ; ಪೊಲೀಸರಿಂದ ಸುತ್ತುವರೆದ ಶ್ರೀರಂಗಪಟ್ಟಣ
ಈ ಯಾತ್ರೆಯು ಶ್ರೀರಂಗಪಟ್ಟಣದಲ್ಲಿರುವ ನಿಮಿಷಾಂಬ ದೇವಸ್ಥಾನದ ಬಳಿಯಿಂದ ಹೊರಟು ಪೇಟೆ ಬೀದಿಯ ಮಾರ್ಗವಾಗಿ ಜಾಮಿಯಾ ಮಸೀದಿ ಸುತ್ತ ಮೆರವಣಿಗೆ ನಡೆಯುವುದರಿಂದ ಈಗಾಗಲೇ ಮಸೀದಿಗೆ ಬ್ಯಾರಿಕೇಡ್ ಅಳವಡಿಸಿ ಭದ್ರತೆ ಒದಗಿಸಲಾಗಿದೆ. ಈ ಯಾತ್ರೆ ಹಿನ್ನೆಲೆ ಬಾಂಬ್ ನಿಷ್ಕ್ರಿಯದಳದವರನ್ನು ಸೇರಿಸಿ ಒಟ್ಟು ಒಂದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆಗೊಳಿಸಲಾಗಿದೆ.
ಇದನ್ನೂ ಒದಿ:ಕ್ಯಾನ್ಸರ್ ಕಾಯಿಲೆಗೆ ಔಷಧಗಳು ಕೈಗೆಟಕುವಂತಿರಬೇಕು: ಹೈಕೋರ್ಟ್