ಮಂಡ್ಯ: ಜನರು ಆಶೀರ್ವಾದ ಮಾಡಿ ನನ್ನನ್ನು ಗೆಲ್ಲಿಸಿದ ಬಳಿಕ ನಾನು ಗುದ್ದಲಿ ಪೂಜೆ ಮಾಡುತ್ತೇನೆ ಎಂದು ನಟ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಿಖಿಲ್ ಪ್ರವಾಸ ಸಂದರ್ಭದಲ್ಲಿ ಟಿಎಂ ಹೊಸೂರು ಗ್ರಾಮಕ್ಕೆಭೇಟಿ ನೀಡಿದ ವೇಳೆ ಈ ಮಾತು ಹೇಳಿದರು.
ಜನರು ಆಶೀರ್ವಾದ ಮಾಡುವರಿಗೂ ಗುದ್ದಲಿ ಪೂಜೆ ಮಾಡುವುದಿಲ್ಲ ಎಂದ ನಿಖಿಲ್ ವಿವಿಧ ಅಭಿವೃದ್ಧಿ ಕಾರ್ಯಕ್ರಮಕ್ಕೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಜೊತೆ ಚಾಲನೆ ನೀಡಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. ಗ್ರಾಮಕ್ಕೆ ಆಗಮಿಸಿದ ನಿಖಿಲ್ ಮಾತನಾಡಿ, ಸದ್ಯ ನಾನು ಗುದ್ದಲಿ ಪೂಜೆ ಮಾಡುವುದಿಲ್ಲ. ಜನ ನನಗೆ ಶಕ್ತಿಕೊಡ್ತಾರೆ. ಆ ಸಮಯ ಬರುತ್ತೆ. ಆಗ ಬಂದು ಗುದ್ದಲಿ ಪೂಜೆ ನೆರವೇರಿಸುತ್ತೇನೆ ಎಂದು ಹೇಳಿದರು.
ಮಂಡ್ಯ ಜನರ ಪ್ರೀತಿ ನನ್ನ ಮೇಲೆ ತುಂಬಾ ಇದೆ. ನಮ್ಮನ್ನು ಎಂದಿಗೂ ಕೈ ಬಿಡಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಗೆಲ್ಲಿಸಿ. ನಿಮ್ಮ ಸೇವೆ ಮಾಡಲು ನಾವು ಸದಾಸಿದ್ದ. ನಿಮ್ಮ ಪ್ರೀತಿಗೆ ಚಿರ ಋಣಿ. ರವೀಂದ್ರ ಶ್ರೀಕಂಠಯ್ಯ ಅವರನ್ನ ಮತ್ತೆ ಗೆಲ್ಲಿಸಿ. ಅಭಿವೃದ್ಧಿ ಕೆಲಸ ಮಾಡೋಣ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಇನ್ನು ಮಂಡ್ಯ ಜನರು ನಿಖಿಲ್ರನ್ನು ಅಭಿಮಾನದಿಂದ ಬರಮಾಡಿಕೊಂಡರು. ಗ್ರಾಮಸ್ಥರು, ಮಹಿಳೆಯರು ಮತ್ತು ಮಕ್ಕಳ ಬಳಿ ತೆರಳಿ ಪ್ರೀತಿಯಿಂದ ಮಾತನಾಡಿದರು. ಈ ವೇಳೆ ಮಗುವೊಂದರ ಜನ್ಮದಿನವನ್ನು ಆಚರಿಸಿದರು. ಮಹಿಳೆಯರು ನಿಖಿಲ್ ಕುಮಾರಸ್ವಾಮಿ ಜೊತೆ ಸೆಲ್ಫಿಗಾಗಿ ಮುಗಿಬಿದ್ದರು.
ಓದಿ:ನಿಖಿಲ್ ಕುಮಾರಸ್ವಾಮಿ ಪುತ್ರ ಆವ್ಯಾನ್ ಜನ್ಮದಿನ: ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಕೆ