ಮಂಡ್ಯ :ಅಕ್ರಮ ಮರಳು ಗಣಿಗಾರಿಕೆ ಮತ್ತೆ ಜಿಲ್ಲೆಯಲ್ಲಿ ಶುರುವಾಗಿದ್ದು, ಟಿಪ್ಪರ್‌ಗಳ ನಂಬರ್ ಪ್ಲೇಟ್ ತೆಗೆಸಿ ಮರಳು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಸಾರ್ವಜನಿಕರು ನೀಡಿದ್ದ ದೂರಿನ ಹಿನ್ನಲೆ ಪೊಲೀಸರು ದಾಳಿ ಮಾಡಿ ಟಿಪ್ಪರ್ ವಶಕ್ಕೆ ಪಡೆದುಕೊಂಡಿದ್ದಾರೆ.
ಹೇಮಾ ತೀರದಲ್ಲಿ ಮತ್ತೆ ಶುರುವಾದ ಅಕ್ರಮ ಮರಳು ಗಣಿಗಾರಿಕೆ: ಟಿಪ್ಪರ್ ವಶಕ್ಕೆ ಪಡೆದ ಪೊಲೀಸ್ - mandya sand mining news
ಕಿಕ್ಕೇರಿ ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತೆ ಜಿಲ್ಲೆಯಲ್ಲಿ ಶುರುವಾಗಿದ್ದು, ಟಿಪ್ಪರ್‌ಗಳ ನಂಬರ್ ಪ್ಲೇಟ್ ತೆಗೆಸಿ ಮರಳು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಸಾರ್ವಜನಿಕರು ನೀಡಿದ್ದ ದೂರಿನ ಹಿನ್ನಲೆ ಪೊಲೀಸರು ದಾಳಿ ಮಾಡಿ ಟಿಪ್ಪರ್ ವಶಕ್ಕೆ ಪಡೆದುಕೊಂಡಿದ್ದಾರೆ.
ಹೇಮಾ ತೀರದಲ್ಲಿ ಮತ್ತೆ ಶುರುವಾದ ಅಕ್ರಮ ಮರಳು ಗಣಿಗಾರಿಕೆ
ಕೆ.ಆರ್. ಪೇಟೆ ತಾಲ್ಲೂಕಿನ ಕಿಕ್ಕೇರಿ ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಹೇಮಾವತಿ ನದಿಯ ತೀರದಲ್ಲಿ ನಡೆಯುತ್ತಿತ್ತು. ಈ ಕುರಿತು ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ದಾಳಿ ನಡೆಸಿದ ಪೊಲೀಸರು ನಂಬರ್ ಪ್ಲೇಟ್ ಇಲ್ಲದ ಟಿಪ್ಪರ್ ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ದಾಳಿ ಮಾಡುತ್ತಿದ್ದಂತೆ ಟಿಪ್ಪರ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹನ ಮಾಲೀಕರ ಹುಡುಕಾಟ ಪ್ರಾರಂಭಿಸಿದ್ದಾರೆ.