ಮಂಡ್ಯ: ಕಳೆದ ರಾತ್ರಿ ಮರಗಳ್ಳರು ಲಕ್ಷಾಂತರ ರೂ. ಬೆಲೆಬಾಳುವ ಸಾಗವಾನಿ ಮರಗಳನ್ನು ಮೀಸಲು ಅರಣ್ಯ ಪ್ರದೇಶದಲ್ಲಿ ಕತ್ತರಿಸಿ ಕಳುವು ಮಾಡುತ್ತಿದ್ದರು. ಆದರೆ, ಮಾಲು ತುಂಬಿದ್ದ ಬೊಲೆರೋ ಪಲ್ಟಿಯಾಗಿ ಕಳ್ಳರು ಸಿಕ್ಕಿಬಿದ್ದಿರುವ ಘಟನೆ ಇಂಡುವಾಳು ಪ್ರಕೃತಿ ಉದ್ಯಾನದಲ್ಲಿ ನಡೆದಿದೆ.
ಲಕ್ಷಾಂತರ ಮೌಲ್ಯದ ಸಾಗವಾನಿ ಮರ ಕಳ್ಳತನ ಯತ್ನ.. ವಾಹನ ಪಲ್ಟಿಯಾಗಿ ಸಿಕ್ಕಿಬಿದ್ದ ಕಳ್ಳರು - mandya_forest
ಹಲವು ದಿನಗಳಿಂದ ಈ ಅರಣ್ಯ ಪ್ರದೇಶದಲ್ಲಿ ಸಾಗವಾನಿ ಮರಗಳು ಕಳ್ಳತನವಾಗುತ್ತಿದ್ದವು. ಕಳ್ಳರ ಜಾಡಿಗೆ ಬಲೆ ಬೀಸಿದ್ದ ಅಧಿಕಾರಿಗಳು ಕೊನೆಗೂ ಯಶಸ್ವಿಯಾಗಿದ್ದಾರೆ.
ಸುಮಾರು 400 ಎಕರೆ ಪ್ರಕೃತಿ ಪಾರ್ಕ್‌ನಲ್ಲಿ 2 ಲಕ್ಷ ರೂ. ಮೌಲ್ಯದ ಸಾಗವಾನಿ ಮರಗಳನ್ನು ಕತ್ತರಿಸಿ ಕರೆದ್ದೊಯ್ಯತ್ತಿದ್ದರು. ಹುಣಸೂರು ಆರ್‌ಟಿಒ ನೋಂದಣಿಯ ಕಾರಿನಲ್ಲಿ ಕಳ್ಳರು ಮಾಲು ಸಾಗಿಸುತ್ತಿದ್ದಾಗ ವಾಹನ ಪಲ್ಟಿಯಾದ ಪರಿಣಾಮ ಚಾಲಕ ಗಾಯಗೊಂಡಿದ್ದಾನೆ. ಸ್ಥಳಕ್ಕೆ ಅಧಿಕಾರಿಗಳು ಆಗಮಿಸುತ್ತಿದ್ದಂತೆಯೇ ಕೆಲವರು ಪರಾರಿಯಾಗಿದ್ದು, ಚಾಲಕನನ್ನು ಬಂಧಿಸಿದ್ದಾರೆ.
ಹಲವು ದಿನಗಳಿಂದ ಈ ಅರಣ್ಯಪ್ರದೇಶದಲ್ಲಿ ಸಾಗವಾನಿ ಮರಗಳು ಕಳ್ಳತನವಾಗುತ್ತಿದ್ದವು. ಕಳ್ಳರ ಜಾಡಿಗೆ ಬಲೆ ಬೀಸಿದ್ದ ಅಧಿಕಾರಿಗಳು ಕೊನೆಗೂ ಯಶಸ್ವಿಯಾಗಿದ್ದಾರೆ. ಆದರೆ ಈ ಕಳ್ಳತನದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬುದು ಪರಿಸರ ಪ್ರೇಮಿಗಳ ವಾದವಾಗಿದೆ.
TAGGED:
mandya_forest