ಕರ್ನಾಟಕ

karnataka

ETV Bharat / state

ಬಾಲಕಿ ಆತ್ಮಹತ್ಯೆ ಪ್ರಕರಣ: ಮಂಡ್ಯದಲ್ಲಿ ರೌಡಿಶೀಟರ್ ಸೇರಿ ಮೂವರ ಬಂಧನ - ಬಾಲ ಮಂದಿರದಲ್ಲಿದ್ದ ಬಾಲಕಿ ಆತ್ಮಹತ್ಯೆ ಪ್ರಕರಣ

ಬಾಲಕಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಡ್ಯದ ರೌಡಿಶೀಟರ್ ಸೇರಿ ಮೂವರನ್ನು ಬಂಧಿಸಲಾಗಿದೆ.

rowdy-sheeter-arrested-in-girl-suicide-case
ಬಾಲ ಮಂದಿರದಲ್ಲಿದ್ದ ಬಾಲಕಿ ಆತ್ಮಹತ್ಯೆ ಪ್ರಕರಣ: ರೌಡಿಶೀಟರ್ ಸೇರಿ ಮೂವರ ಬಂಧನ

By

Published : Sep 2, 2021, 12:35 PM IST

ಮಂಡ್ಯ:ಬಾಲ ಮಂದಿರದಲ್ಲಿದ್ದ ಬಾಲಕಿ ಆತ್ಮಹತ್ಯೆಗೆ ಶರಣಾದ ಪ್ರಕರಣದ ಸಂಬಂಧ ಮಂಡ್ಯದ ರೌಡಿಶೀಟರ್ ಸೇರಿ ಮೂವರನ್ನು ನಗರದ ಪಶ್ಚಿಮ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಾಲಕಿಯನ್ನು ಪ್ರೀತಿಸುತ್ತಿದ್ದ ಹಿನ್ನೆಲೆಯಲ್ಲಿ ಏಪ್ರಿಲ್ 15ರಂದು ದರ್ಶನ್ ಎಂಬ ಬಾಲಕನನ್ನು ಹತ್ಯೆ ಮಾಡಲಾಗಿತ್ತು. ಕೊಲೆ ಆರೋಪದಡಿ ಬಾಲಕಿಯ ಪೋಷಕರು ಜೈಲು ಸೇರಿದ್ದರು. ಬಳಿಕ ಬಾಲಮಂದಿರದಲ್ಲಿದ್ದ ಬಾಲಕಿ ಮಾನ್ವಿತಾ, ಅಲ್ಲೇ ಡೆತ್​ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಇದನ್ನೂ ಓದಿ:ಬಾಲಕನ ಹತ್ಯೆ ಪ್ರಕರಣ ಮಾಸುವ ಮುನ್ನವೇ ನೇಣಿಗೆ ಶರಣಾದ ಬಾಲಕಿ

ಆತ್ಮಹತ್ಯೆಗೂ ಮುನ್ನ ಬಾಲಕಿಯು ಡೆತ್​ನೋಟ್​​ನಲ್ಲಿ ಮಂಡ್ಯದ ರೌಡಿಶೀಟರ್ ಅಶೋಕ್ ಪೈ ಎಂಬಾತನ ಹೆಸರು ಬರೆದಿದ್ದಳು. ಈ ಹಿನ್ನೆಲೆಯಲ್ಲಿ ಪೈ ಸೇರಿ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ನಟ, ಬಿಗ್​​ ಬಾಸ್​ ವಿಜೇತ ಸಿದ್ಧಾರ್ಥ್ ಶುಕ್ಲಾ ಇನ್ನಿಲ್ಲ..!

ABOUT THE AUTHOR

...view details