ಮಂಡ್ಯ:ನಗರದ ಗುತ್ತಲಿನ ಕಾಳಮ್ಮ ದೇವಾಲಯದ ಬಳಿ ನಡೆದ ರೌಡಿ ನಂದನ್ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ರೌಡಿ ನಂದನ್ ಕೊಲೆ ಪ್ರಕರಣ: ಆರೋಪಿಗಳು ಅಂದರ್ - undefined
ಏಪ್ರಿಲ್.04ರಂದು ಬ್ಯಾನರ್ ಕಟ್ಟುವ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ರೌಡಿ ನಂದನ್ ಕಾಳಮ್ಮ ದೇವಾಲಯದ ಬಳಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ಧಾರೆ.

ಬಂಧಿತ ಆರೋಪಿಗಳು
ಪೊಲೀಸ್ ಪ್ರೆಸ್ಮೀಟ್
ಚಂದನ್, ಅಜಯ್ ಕುಮಾರ್, ಹರ್ಷಿತ್ ಗೌಡ, ಕಿರಣ್, ಮನೋಜ್ ಬಂಧಿತ ಆರೋಪಿಗಳು. ಇವರನ್ನು ಮದ್ದೂರು ಪಟ್ಟಣದಲ್ಲಿ ಬಂಧಿಸಲಾಗಿದ್ದು, ಇವರೆಲ್ಲರ ಮೇಲೆ ರೌಡಿಶೀಟರ್ ಪ್ರಕರಣಗಳು ದಾಖಲಾಗಿವೆ.
ಏ.04ರಂದು ಬ್ಯಾನರ್ ಕಟ್ಟುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ರೌಡಿ ನಂದನ್ ಕೊಲೆ ಮಾಡಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಶೀಘ್ರ ಕಾರ್ಯಚರಣೆ ನಡೆಸಿ ಆರೋಪಿಗಳುನ್ನು ಬಂಧಿಸಿದ್ದಾರೆ ಎಂದು ಎಸ್‌ಪಿ ಶಿವಪ್ರಕಾಶ್ ದೇವರಾಜು ತಿಳಿಸಿದರು.