ಕರ್ನಾಟಕ

karnataka

ETV Bharat / state

ಸರ್ಕಾರಿ ಕಟ್ಟಡದ ಚಾವಣಿ ಕುಸಿತ : ತಪ್ಪಿದ ಭಾರೀ ಅನಾಹುತ - ಇತ್ತೀಚಿನ ಮಂಡ್ಯ ಸುದ್ದಿ

ಪುರಸಭೆಗೆ ಸೇರಿದ ವಾಣಿಜ್ಯ ಸಂಕೀರ್ಣದ ಚಾವಣಿ ಕುಸಿತ ಕಂಡುಬಂದಿದ್ದು ಇಬ್ಬರಿಗೆ ಗಾಯವಾದ ಘಟನೆ ಕೆ.ಆರ್.ಪೇಟೆಯಲ್ಲಿ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸರ್ಕಾರಿ ಕಟ್ಟಡದ ಮೇಲ್ಛಾವಣಿ ಕುಸಿತ : ತಪ್ಪಿದ ಭಾರೀ ಅನಾಹುತ

By

Published : Oct 19, 2019, 4:48 PM IST

ಮಂಡ್ಯ:ಪುರಸಭೆಗೆ ಸೇರಿದ ವಾಣಿಜ್ಯ ಸಂಕೀರ್ಣದ ಚಾವಣಿ ಕುಸಿತ ಕಂಡುಬಂದಿದ್ದು, ಇಬ್ಬರಿಗೆ ಗಾಯವಾದ ಘಟನೆ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ.

ಸರ್ಕಾರಿ ಕಟ್ಟಡದ ಚಾವಣಿ ಕುಸಿತ : ತಪ್ಪಿದ ಭಾರೀ ಅನಾಹುತ

ಘಟನೆಯಿಂದ ಆತಂಕಗೊಂಡ ಸ್ಥಳೀಯರು ಸದರಿ ಕಟ್ಟಡ ಹಳೆಯದಾಗಿದ್ದು, ಕೂಡಲೇ ದುರಸ್ತಿಗೊಳಿಸುವಂತೆ ವರ್ತಕರು ಆಗ್ರಹ ಮಾಡಿದ್ದಾರೆ. ಇನ್ನೂ ಮಳಿಗೆಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಸಾಮಗ್ರಿಗಳು ಧ್ವಂಸಗೊಂಡಿವೆ. ಯಾವುದೇ ಪ್ರಾಣಾಪಾಯವಾಗಿಲ್ಲದೇ ಇದ್ದರೂ, ವ್ಯಾಪಾರ ಮಾಡುತ್ತಿದ್ದ ಇಬ್ಬರು ಗ್ರಾಹಕರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

ಸ್ಥಳಕ್ಕೆ ಪುರಸಭೆ ಅಧಿಕಾರಿಗಳು, ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಸದ್ಯ ಸ್ಥಳೀಯ ವರ್ತಕರಿಗೆ ಕಟ್ಟಡದ ದುರಸ್ತಿಯ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.

ABOUT THE AUTHOR

...view details