ಮಂಡ್ಯ: ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, "ಭಾರತ ಸಿಂಧೂರಿ" ಆಗಿ ತೆರೆ ಮೇಲೆ ಮಿಂಚಲಿದ್ದಾರೆ. ರೋಹಿಣಿ ಸಿಂಧೂರಿ ಬಯೋಪಿಕ್ ಸಿನಿಮಾ ಆಗಲಿದ್ದು, ಲಾಕ್ಡೌನ್ ನಂತರ ಸಿನಿಮಾ ಸೆಟ್ಟೇರಲಿದೆ. ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ರಿಜಿಸ್ಟರ್ ಆಗಿದ್ದು, ಮಂಡ್ಯದ ಕೃಷ್ಣ ಸ್ವರ್ಣ ಎಂಬುವವರಿಂದ ಟೈಟಲ್ ರಿಜಿಸ್ಟರ್ ಮಾಡಿಸಲಾಗಿದೆ.
ರೋಹಿಣಿ ಸಿಂಧೂರಿ ಬಯೋಪಿಕ್; ಈ ನಟಿಗೆ ಡಿಸಿಯಾಗುವ ಸುವರ್ಣಾವಕಾಶ - ರೋಹಿಣಿ ಸಿಂಧೂರಿ ಬಯೋಪಿಕ್ ಟೈಟಲ್ ರಿಜಿಸ್ಟರ್
ಇತ್ತೀಚೆಗೆ ರಾಜ್ಯ ರಾಜಕೀಯ ಹಾಗೂ ಆಡಳಿತಾತ್ಮಕವಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಹೆಸರನ್ನು ಕೇಳದವರು ಯಾರೂ ಇಲ್ಲ. ಈಗ ಈ ವ್ಯಾಪ್ತಿಯನ್ನು ಮೀರಿ ಸಿನಿಮಾ ರಂಗದಲ್ಲಿಯೂ ಅವರ ಹೆಸರು ಚಾಲ್ತಿಯಲ್ಲಿದೆ. ಅವರ ಬಯೋಪಿಕ್ ಸಿನಿಮಾ ಆಗಲಿದೆ ಎಂಬ ಬಿಸಿಬಿಸಿ ಸುದ್ದಿಯೊಂದು ಚಂದವನವದ ಅಂಗಳದಲ್ಲಿ ಹರಿದಾಡುತ್ತಿದೆ.
ರೋಹಿಣಿ ಸಿಂಧೂರಿ
ಕೃಷ್ಣ ಸ್ವರ್ಣಸಂದ್ರ ಕಥೆ, ಚಿತ್ರಕಥೆ, ಸಾಹಿತ್ಯ, ರಚನೆ, ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಕೃಷ್ಣ ಸ್ವರ್ಣ ಮಂಡ್ಯ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯೂ ಆಗಿದ್ದಾರೆ.
ಈ ಸಿನಿಮಾದ ಸಿಂಧೂರಿ ಪಾತ್ರಕ್ಕೆ ಅಕ್ಷತಾ ಪಾಂಡವಪುರ ಆಯ್ಕೆಯಾಗಿದ್ದು, ಸಿಂಧೂರಿ, ನಟನೆಗೆ ಅಕ್ಷತಾ ಒಪ್ಪಿಗೆ ನೀಡಿದ್ದಾರೆ. 'ಈಟಿವಿ ಭಾರತ'ಕ್ಕೆ ನಿರ್ದೇಶಕ ಕೃಷ್ಣ ಸ್ವರ್ಣಸಂದ್ರ ಮಾಹಿತಿ ನೀಡಿದ್ದು, ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಫಿಲಂಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣ ಮಾಡಲಿದ್ದು, ಜೂನ್ 15ರ 2020ರಂದೇ ಟೈಟಲ್ ರಿಜಿಸ್ಟರ್ ಮಾಡಿದ್ದಾರೆ.
Last Updated : Jun 8, 2021, 6:31 PM IST