ಮಂಡ್ಯ:ಅಂಗಡಿಯ ರೊಲಿಂಗ್ ಶೆಟರ್ ಅನ್ನು ಗ್ಯಾಸ್ ಕಟರ್ ಮೂಲಕ ಕತ್ತರಿಸಿ, ನಗದು ಸೇರಿದಂತೆ ಅಂಗಡಿಯಲ್ಲಿದ್ದ ಇತರ ವಸ್ತುಗಳನ್ನು ಕಳವು ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲುಕಿನ ಗಂಜಾಂನಲ್ಲಿ ನಡೆದಿದೆ.
ಗಂಜಾಂನಲ್ಲಿ ಖದೀಮರ ಕೈಚಳಕ - undefined
ಶ್ರೀರಂಗಪಟ್ಟಣದ ಗಂಜಾಂ ಊರಿನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದು, ನಿಮಿಷಾಂಬ ಕೂಲ್ ಪಾರ್ಲರ್‌ಗೆ ಕನ್ನ ಹಾಕಿ ನಗದು , ಮತ್ತಿತರ ವಸ್ತುಗಳನ್ನು ಕದ್ದೊಯ್ದಿದ್ದಾರೆ.
ನಿಮಿಷಾಂಭ ಕೂಲ್ ಪಾರ್ಲರ್
ಗಂಜಾಂನ ನಿಮಿಷಾಂಬ ಕೂಲ್ ಪಾರ್ಲರ್‌ಗೆ ಕನ್ನ ಹಾಕಲಾಗಿದ್ದು, ನಗದು, ಸಿಲಿಂಡರ್, ಸಿಗರೇಟ್ ಸೇರಿದಂತೆ ಹಲವು ವಸ್ತುಗಳನ್ನು ಕಳೆದ ರಾತ್ರಿ ಕಳ್ಳರು ಕದ್ದೊಯ್ದಿದ್ದಾರೆ. ಮರುದಿನ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಈ ಕುರಿತು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.