ಕರ್ನಾಟಕ

karnataka

ETV Bharat / state

ತಹಶೀಲ್ದಾರ್ ಕಚೇರಿ ಸರ್ಚ್ ಮಾಡಿದ ಕಂದಾಯ ಸಚಿವರು - ಮಾಜಿ ಸಚಿವ ಡಿ.ಸಿ. ತಮ್ಮಣ್ಣ

ಕಂದಾಯ ಸಚಿವ ಆರ್. ಅಶೋಕ್ ಮದ್ದೂರು ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳು, ಸಿಬ್ಬಂದಿಗೆ ಶಾಕ್ ನೀಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಅಧಿಕಾರಿಗಳ ಮೇಲೆ ದೂರುಗಳ ಸುರಿಮಳೆ ಸುರಿಸಿದರು.

ಮದ್ದೂರು ತಹಶೀಲ್ದಾರ್ ಕಚೇರಿಗೆ ಕಂದಾಯ ಸಚಿವರ ಭೇಟಿ

By

Published : Oct 17, 2019, 6:22 AM IST

Updated : Oct 17, 2019, 7:29 AM IST

ಮಂಡ್ಯ: ಕಂದಾಯ ಸಚಿವ ಆರ್. ಅಶೋಕ್ ಮದ್ದೂರು ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿ ವರ್ಗ ಸಿಬ್ಬಂದಿಗೆ ಆಘಾತ ನೀಡಿದರು.

ಮದ್ದೂರು ತಹಶೀಲ್ದಾರ್ ಕಚೇರಿಗೆ ಸಚಿವರು ಭೇಟಿ ನೀಡಿದಾದ ಸಾರ್ವಜನಿಕರು ತಮ್ಮ ಅಹವಾಲು ಹೇಳಿಕೊಂಡರು. ಇದೇ ವೇಳೆ ಅಧಿಕಾರಿಗಳ ಮೇಲೆ ದೂರುಗಳ ಸುರಿಮಳೆ ಸುರಿಸಿದರು.

ಮದ್ದೂರು ತಹಶೀಲ್ದಾರ್ ಕಚೇರಿಗೆ ಕಂದಾಯ ಸಚಿವರ ಭೇಟಿ, ಪರಿಶೀಲನೆ

ದೂರುಗಳು ಬರುತ್ತಿದ್ದಂತೆ ಅಧಿಕಾರಿಗಳ, ಸಿಬ್ಬಂದಿ ಲಾಕರ್, ಛೇಂಬರ್, ಬ್ಯಾಗ್ ಸೇರಿದಂತೆ ಇನ್ನಿತರೆ ಸ್ಥಳ ಹಾಗು ವಸ್ತುಗಳನ್ನು ಖುದ್ದು ಪರಿಶೀಲನೆ ಮಾಡಿರುವ ಅಶೋಕ್‌ ಬಿಸಿ ಮುಟ್ಟಿಸಿದ್ದಾರೆ. ಸಚಿವರು ತಪಾಸಣೆ ಮಾಡುತ್ತಿದ್ದಂತೆ ಸಿಬ್ಬಂದಿ ಭಯಗೊಂಡ ಘಟನೆಯೂ ನಡೆಯಿತು.

ಸಚಿವರ ಜೊತೆ ಮಾಜಿ ಸಚಿವ ಡಿ.ಸಿ. ತಮ್ಮಣ್ಣ, ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಸಾಥ್ ನೀಡಿದರು. ಅಧಿಕಾರಿಗಳ ಮೇಲೆ ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಿದ ಸಚಿವರು, ಮುಂದೆ ಈ ರೀತಿ ದೂರುಗಳು ಬರದಂತೆ ಎಚ್ಚರ ವಹಿಸುವಂತೆ ಸೂಚಿಸಿದ್ರು.

Last Updated : Oct 17, 2019, 7:29 AM IST

ABOUT THE AUTHOR

...view details