ಕರ್ನಾಟಕ

karnataka

ETV Bharat / state

ಜನರಿಂದ ನಿರಾಸಕ್ತಿ... ಖಾಲಿ ಕುರ್ಚಿಗಳ ಮಧ್ಯೆಯೇ ಡಿಸಿಯಿಂದ ಕಂದಾಯ ಆದಾಲತ್ - undefined

ಜಿಲ್ಲಾಧಿಕಾರಿ ಮಂಜುಶ್ರೀ ಮಂಡ್ಯದ ಮದ್ದೂರು ತಾಲೂಕಿನ ಹನುಮಂತಪುರದಲ್ಲಿ ಕಂದಾಯ ಆದಾಲತ್ ನಡೆಸಿದರು. ಆದರೆ, ಕೆಲವೇ ಜನರು ಆದಾಲತ್‌ಗೆ ಆಗಮಿಸಿ ಮನವಿ ಸಲ್ಲಿಸಿದರು.

ಆದಾಲತ್

By

Published : Jun 29, 2019, 9:07 PM IST

ಮಂಡ್ಯ: ಜನರ ನಿರಾಸಕ್ತಿ ವ್ಯಕ್ತವಾದರೂ ಕೂಡ ಖಾಲಿ ಕುರ್ಚಿಗಳ ಮಧ್ಯೆಯೇ ಜಿಲ್ಲಾಧಿಕಾರಿ ಮಂಜುಶ್ರೀ ಮದ್ದೂರು ತಾಲೂಕಿನ ಹನುಮಂತಪುರದಲ್ಲಿ ಕಂದಾಯ ಆದಾಲತ್ ನಡೆಸಿದರು.

ಇಂದು ಬೆಳಗ್ಗೆ ಕಂದಾಯ ಆದಾಲತ್ ಇತ್ತು. ಇದಕ್ಕಾಗಿ ತಾಲೂಕು ಆಡಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಕೆಲವೇ ಜನರು ಆದಾಲತ್‌ಗೆ ಆಗಮಿಸಿ ಮನವಿ ಸಲ್ಲಿಸಿದರು. ಆದಾಲತ್​​ನಲ್ಲಿ ಖಾಲಿ ಕುರ್ಚಿಗಳಿದ್ದವು. ಕೆಲವು ರೈತರು ತಮ್ಮ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸರಿಯಾದ ಮಾಹಿತಿ ಕೊರತೆಯೂ ಜನರ ಗೈರಿಗೆ ಕಾರಣ ಎಂದು ಹೇಳಲಾಗಿದೆ.

ಡಿಸಿಯಿಂದ ಕಂದಾಯ ಆದಾಲತ್

ಖಾಲಿ ಕುರ್ಚಿಗಳ ದರ್ಶನಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ಈ ರೀತಿ ಬೇಕಾಬಿಟ್ಟಿ ಕಂದಾಯ ಆದಾಲತ್​​ನಲ್ಲಿ ಯಾವುದೇ ಪ್ರಯೋಜನವಿಲ್ಲ. ಮುಂದೊಂದು ದಿನ ಕಂದಾಯ ಅದಾಲತ್ ನಡೆಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details