ಮಂಡ್ಯ:ಮದುವೆ ಮನೆಯಲ್ಲಿ ಎಲ್ಇಡಿ ಫಿಕ್ಸ್ ಮಾಡಿ ಮಧುಮಗ ಮಧುಮಗಳ ವಿಡಿಯೋ, ಫೋಟೋಗಳನ್ನು ಅನಾವರಣಗೊಳಿಸುವುದು ಸಾಮಾನ್ಯ. ಆದ್ರೆ ಚುನಾವಣೆ ಹಿನ್ನಲೆ ಇಲ್ಲೊಂದು ಮದುವೆ ಮನೆಯಲ್ಲಿ ಬೇರೆಯೇ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.
ಮದುವೆ ಮನೆಯಲ್ಲಿ ಚುನಾವಣಾ ಫಲಿತಾಂಶ ಲೈವ್... ವಧುವರರ ಬದಲು ಟಿವಿ ನೋಡ್ತಿದ್ದ ಮಂಡ್ಯ ಜನ - undefined
ಮಂಡ್ಯದ ಶಶಿ ಕಿರಣ ಹಾಗೂ ಬಿಜಿಎಸ್ ಸಮುದಾಯ ಭವನದಲ್ಲಿ ನಡೆಯತ್ತಿರುವ ಮದುವೆಮನೆಯಲ್ಲಿ ಅಳವಡಿಸಿರುವ ಎಲ್ಇಡಿಯಲ್ಲಿ ಚುನಾವಣಾ ಫಲಿತಾಂಶ ಪ್ರಕಟಿಸಲಾಗುತ್ತಿದೆ.
ಹೌದು ಲೋಕಸಭಾ ಚುನಾವಣೆ ರಣಕಣದಲ್ಲಿ ಅತಿಹೆಚ್ಚು ಚರ್ಚೆಗೀಡಾದ ಕ್ಷೇತ್ರ ಮಂಡ್ಯ ವಿಧಾನಸಭಾ ಕ್ಷೇತ್ರ. ಇಲ್ಲಿನ ಶಶಿ ಕಿರಣ ಹಾಗೂ ಬಿಜಿಎಸ್ ಸಮುದಾಯ ಭವನದಲ್ಲಿ ನೆರವೇರುತ್ತಿರುವ ಮದುವೆ ಕಾರ್ಯಕ್ರಮದಲ್ಲಿ ಅಳವಡಿಸಿರುವ ಸ್ಕ್ರೀನ್ನಲ್ಲಿ ವಧುವರರ ಫೋಟೋ, ವೀಡಿಯೋ ತೋರುವ ಬದಲು ಚುನಾವಣಾ ಫಲಿತಾಂಶ ಪ್ರಕಟಿಸಲಾಗುತ್ತಿದೆ.
ಇದು ಮಂಡ್ಯ ಕ್ಷೇತ್ರದಲ್ಲಿರುವ ನೆಕ್ ಟು ನೆಕ್ ಫೈಟ್ ಅನ್ನು ತಿಳಿಸುತ್ತದೆ. ಹಾಗೂ ಜನರಲ್ಲಿ ತಮ್ಮ ನಾಯಕರನ್ನು ತಿಳಿಯುವ ಕುತೂಹಲವನ್ನು ತೋರಿಸುತ್ತದೆ. ಏನೇ ಆಗಲಿ ಇದು ಫಲಿತಾಂಶದ ಕಾರಣ ಮುಂದಿಟ್ಟುಕೊಂಡು ಅತಿಥಿಗಳು ಮದುವೆಯನ್ನು ತಪ್ಪಿಸದಿರಲಿ ಎಂದು ಮದುವೆ ಮನೆಯವರು ಮಾಡಿರುವ ಉಪಾಯವೇ ಸರಿ.