ಮಂಡ್ಯ: ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಹುದ್ದೆಯನ್ನು ರಾತ್ರೋರಾತ್ರಿ ಬದಲಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕಳೆದ ಎರಡು ದಿನಗಳ ಹಿಂದಷ್ಟೇ ಜಿಲ್ಲೆಯ ಜಿಲ್ಲಾ ಆರೋಗ್ಯಾಧಿಕಾರಿ (ಆರ್ಸಿಹೆಚ್ಓ )ಯಾಗಿ ಕರ್ತವ್ಯ ನಿರ್ವಹಿಸ್ತಿದ್ದ ಕೇಶವ್ ರಾಜ್ ಎಂಬುವವರನ್ನು ಸರ್ಕಾರ ನೇಮಿಸಿ ಆದೇಶಿಸಿತ್ತು. ಆದರೆ, ಇಂದು ಮತ್ತೊಂದು ಆದೇಶ ಮಾಡಿ ನೇಮಕಾತಿ ರದ್ದು ಗೊಳಿಸಿ ನಾಗಮಂಗಲ ತಾಲೂಕಿನ ಟಿಹೆಚ್ಒ ಆಗಿದ್ದ ಡಾ. ಧನಂಜಯ ಎಂಬುವವರನ್ನು ನೇಮಿಸಿ ಆದೇಶ ಹೊರಡಿಸಿದೆ.