ಮಂಡ್ಯ: ಲೋಕ ಸಮರದಲ್ಲಿ ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್ ಈಗ ಪಕ್ಷ ಸಂಘಟನೆಗೆ ಮುಂದಾಗಿದೆ. ಚುನಾವಣೆ ವೇಳೆ ಪಕ್ಷ ವಿರೋಧಿ ಎಂದು ವಜಾ ಮಾಡಿದ್ದ ಮುಖಂಡರನ್ನು ಆಯಾ ಸ್ಥಾನಕ್ಕೆ ಮರುನೇಮಕ ಮಾಡಲು ಮುಂದಾಗಿದೆ.
ಉಪಕದನಕ್ಕೆ ಕೈ ಭರ್ಜರಿ ಪ್ಲಾನ್.. ವಜಾ ಮಾಡಿದ್ದ ಮುಖಂಡರಿಗೆ ಮಣೆ, ಮರು ನೇಮಕ - Political updates
ಲೋಕ ಸಮರದಲ್ಲಿ ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್ ಈಗ ಪಕ್ಷ ಸಂಘಟನೆಗೆ ಮುಂದಾಗಿದೆ. ಚುನಾವಣೆ ವೇಳೆ ಪಕ್ಷ ವಿರೋಧಿ ಎಂದು ವಜಾ ಮಾಡಿದ್ದ ಮುಖಂಡರನ್ನು ಆಯಾ ಸ್ಥಾನಕ್ಕೆ ಮರುನೇಮಕ ಮಾಡಲು ಮುಂದಾಗಿದೆ.
ಕೆ.ಆರ್.ಪೇಟೆ ಬ್ಲಾಕ್ ಕಾಂಗ್ರೆಸ್ ಹಾಗೂ ಯೂತ್ ಕಾಂಗ್ರೆಸ್ ಅಧ್ಯಕ್ಷರ ಮರು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಕೆ.ಆರ್.ಪೇಟೆ ಉಪಚುನಾವಣೆ ಹಿನ್ನೆಲೆ ಪಕ್ಷ ಸಂಘಟನೆಗೆ ಮುಂದಾಗಿದೆ. ಕೆ.ಆರ್.ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆ.ಆರ್.ರವೀಂದ್ರಬಾಬು ಅವರನ್ನು ಮರು ನೇಮಕ ಮಾಡಿದರೆ, ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಂಸದೆ ಸುಮಲತಾ ಅಂಬರೀಶ್ ಬೆಂಬಲಿಗ ಅರವಿಂದ್ ಅವರನ್ನು ನೇಮಕ ಮಾಡಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ.ಘೋರ್ಪಡೆ ಆದೇಶ ಹೊರಡಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಕೆಲಸ ಮಾಡಿದ್ದ ರವೀಂದ್ರಬಾಬು ಹಾಗೂ ಅರವಿಂದ್‌ರನ್ನು ಪಕ್ಷದಿಂದ ವಜಾ ಮಾಡಲಾಗಿತ್ತು. ಉಪಚುನಾವಣೆ ಘೋಷಣೆಯಾದ ಕಾರಣ ಮತ್ತೆ ಅಧ್ಯಕ್ಷರಾಗಿ ನೇಮಿಸಲಾಗಿದೆ.