ಮಂಡ್ಯ:ರೆಬೆಲ್ ಶಾಸಕರು ಆಡಳಿತದಿಂದ ಬೇಸತ್ತು ರಾಜೀನಾಮೆ ನೀಡಿರಬಹುದು ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿ, ಹಿಂದಿನ ರಾಜೀನಾಮೆ ಪ್ರಕರಣಗಳನ್ನು ಅಧ್ಯಯನ ಮಾಡಬೇಕಿತ್ತು ಎನ್ನುವ ಮೂಲಕ ಸ್ಪೀಕರ್ ತೀರ್ಪಿಗೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ನಾಗಮಂಗಲದಲ್ಲಿ ಮಾತನಾಡಿದ ಎನ್.ಚಲುವರಾಯಸ್ವಾಮಿ, ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕರನ್ನು ಅನರ್ಹಗೊಳಿಸಿದ್ದು, ಹಿಂದಿನ ರಾಜೀನಾಮೆ ಪ್ರಕರಣಗಳನ್ನು ಅಧ್ಯಯನ ಮಾಡಬೇಕಿತ್ತು. ಆಪರೇಷನ್ ಕಮಲಕ್ಕಿಂತ ಸ್ವತಃ ಜೆಡಿಎಸ್-ಕಾಂಗ್ರೆಸ್ನ ಶಾಸಕರೇ ಆಡಳಿತದ ವಿಚಾರದಲ್ಲಿ ನಮನೊಂದು ಹೋಗಿರುವುದು ವಾಸ್ತವಾಗಿದೆ. ಕೊಂಚ ಬಿಜೆಪಿಯವರ ಪ್ರಯತ್ನವೂ ಇರಬಹುದು. ರಮೇಶ್ ಜಾರಕಿಹೊಳಿಯಿಂದ ಪ್ರಾರಂಭವಾದದ್ದು ವಿಶ್ವನಾಥ್ವರೆಗೂ ಆಡಳಿತದಿಂದ ಶಾಸಕರು ಬೇಸತ್ತು ಹೋಗಿದ್ದು, ಆ ಕುರಿತು ಚರ್ಚೆ ಮಾಡಬೇಕು ಎಂದರು.