ಮಂಡ್ಯ: ಇಂದಿನಿಂದ ಉಪಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರಲಿದ್ದು, ಇದಕ್ಕೆ ಕೆಲವೇ ಗಂಟೆ ಬಾಕಿ ಇದ್ದಂತೆ ಅನರ್ಹ ಶಾಸಕ ನಾರಾಯಣಗೌಡ ಆಟೋ ಚಾಲಕರಿಗೆ ಭರ್ಜರಿ ಗಿಫ್ಟ್ ಘೋಷಿಸಿದ್ದಾರೆ.
ಆಟೋ ಚಾಲಕರಿಗೆ ಭರ್ಜರಿ ಗಿಫ್ಟ್ ಘೋಷಿಸಿದ ಅನರ್ಹ ಶಾಸಕ ನಾರಾಯಣಗೌಡ! - K R Pete rebel MLA Narayanagowda news
ಆಟೋ ಹಾಗೂ ಇತರ ವಾಹನಗಳು ಕಡ್ಡಾಯವಾಗಿ ವಿಮೆ ಹೊಂದಿರಬೇಕು. ಕೆಲವೊಮ್ಮೆ ವಾಹನಗಳ ಅಪಘಾತದಿಂದ ಚಾಲಕರು ಹಾಗೂ ಪ್ರಯಾಣಿಕರ ಕುಟುಂಬ ಬೀದಿಗೆ ಬರುತ್ತವೆ. ಇದರಿಂದ ತಮ್ಮ ವಾಹನಗಳಿಗೆ ವಿಮೆ ಇರಬೇಕು. ಹೀಗಾಗಿ ತಾನೇ ಖುದ್ದು ಜವಾಬ್ದಾರಿ ವಹಿಸಿ ಆಟೋಗಳಿಗೆ ವಿಮೆ ಮಾಡಿಸುವ ಕೆಲಸ ಮಾಡುವುದಾಗಿ ಅನರ್ಹ ಶಾಸಕ ನಾರಾಯಣಗೌಡ ಘೋಷಣೆ ಮಾಡಿದ್ದಾರೆ.
ಕೆ. ಆರ್. ಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಆಟೋಗಳಿಗೆ ವರ್ಷದ ವಿಮೆ ಮಾಡಿಸಲು ಅನರ್ಹ ಶಾಸಕ ನಾರಾಯಣಗೌಡ ಮುಂದಾಗಿದ್ದಾರೆ. ಕಿಕ್ಕೇರಿಯಲ್ಲಿ ಆಟೋ ಚಾಲಕ-ಮಾಲೀಕರ ಸಂಘದಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾರಾಯಣಗೌಡ ಈ ಘೋಷಣೆ ಮಾಡಿದ್ದಾರೆ.
ಕನ್ನಡ ಬಾಷೆಯನ್ನು ಉಳಿಸಿ ಬೆಳೆಸುವ ಜೊತೆಗೆ ಆಟೋ ಹಾಗೂ ಇತರ ವಾಹನಗಳು ಕಡ್ಡಾಯವಾಗಿ ವಿಮೆ ಹೊಂದಿರಬೇಕು. ಕೆಲವೊಮ್ಮೆ ವಾಹನಗಳ ಅಪಘಾತದಿಂದ ಚಾಲಕರು ಮತ್ತು ಪ್ರಯಾಣಿಕರ ಕುಟುಂಬಗಳು ಬೀದಿಗೆ ಬರುತ್ತವೆ. ಇದರಿಂದ ತಮ್ಮ ವಾಹನಗಳಿಗೆ ವಿಮೆ ಇರಬೇಕು. ಹೀಗಾಗಿ ತಾನೇ ಖುದ್ದು ಜವಾಬ್ದಾರಿ ಪಡೆದು ಆಟೋಗಳಿಗೆ ವಿಮೆ ಮಾಡಿಸುವ ಕೆಲಸ ಮಾಡುವುದಾಗಿ ಘೋಷಣೆ ಮಾಡಿದರು.