ಮಂಡ್ಯ: ಜಿಲ್ಲೆಯ ಅಭಿವೃದ್ಧಿಗಾಗಿ ಹೊಂದಾಣಿಕೆಗೆ ಯಾವಾಗಲು ಸಿದ್ಧ. ಅದಕ್ಕಾಗಿ ಈಗಾಗಲೇ ಮಂಡ್ಯದಲ್ಲಿ ಮನೆ ಮಾಡಿದ್ದೇನೆ. ಸದ್ಯದಲ್ಲೇ ವಾಸ್ತವ್ಯ ಮಾಡ್ತೀನಿ. ವಾರದಲ್ಲಿ ಮೂರು ದಿನ ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡಿ ಜನರ ಅಹವಾಲುಗಳನ್ನು ಸ್ವೀಕರಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಮಂಡ್ಯದ ಅಭಿವೃದ್ಧಿಗಾಗಿ ಹೊಂದಾಣಿಕೆಗೆ ಸಿದ್ಧ: ಸಂಸದೆ ಸುಮಲತಾ - ಕೀಲಾರ ಗ್ರಾಮ
ಸದ್ಯ ಈಗ ಸಂಸತ್ ಅಧಿವೇಶನ ಆರಂಭವಾಗಲಿದೆ. ಅದೊಂದು ಪ್ರಜಾಪ್ರಭುತ್ವದ ದೇವಾಲಯ. ಅಲ್ಲಿಗೆ ಹೋದಾಗ ಆದ ಸಂತಸದ ಕ್ಷಣ ಹೇಳಲು ಆಗ್ತಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸಂತಸ ವ್ಯಕ್ತಪಡಿಸಿದರು.
ಕೀಲಾರ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಸ್ಯೆಗಳನ್ನು ಆಲಿಸಲು ಸ್ವಲ್ಪ ಕಷ್ಟವಾಗುತ್ತಿದೆ. ಅಷ್ಟೇ ಅಲ್ಲದೆ, ನನಗೆ ಕಚೇರಿ ಮತ್ತು ಸಿಬ್ಬಂದಿ ಇನ್ನೂ ಸಿಕ್ಕಿಲ್ಲ. ಈ ಸೌಲಭ್ಯಗಳು ದೊರೆತ ಬಳಿಕ ಜನರ ಸಮಸ್ಯೆ ಆಲಿಸುವೆ. ನಾನು ದೆಹಲಿಯಲ್ಲಿ ಇದ್ದಾಗ ಎಲ್ಲರಿಗೂ ಎಲ್ಲ ಸಂದರ್ಭದಲ್ಲಿ ಸಿಗಲು ಆಗಲ್ಲ. ನನ್ನಿಂದ ಯಾವುದೇ ವಿವಾದಾತ್ಮಕ ಹೇಳಿಕೆ ನಿಮಗೆ ಸಿಗುವುದಿಲ್ಲ ಎಂದರು.
ಸದ್ಯ ಈಗ ಅಧಿವೇಶನ ಆರಂಭವಾಗಲಿದೆ. ಅದೊಂದು ಪ್ರಜಾಪ್ರಭುತ್ವದ ದೇವಾಲಯ. ಅಲ್ಲಿಗೆ ಹೋದಾಗ ಆದ ಸಂತಸದ ಕ್ಷಣ ಹೇಳಲು ಆಗ್ತಿಲ್ಲ ಎಂದರು. ಇನ್ನು ಕಾರ್ಯಕ್ರಮಕ್ಕೆ ಗೈರಾದ ಜಿಲ್ಲಾ ಸಚಿವರ ಕುರಿತು ಪ್ರಶ್ನಿಸಿದಾಗ, ಅವರನ್ನೇ ಕೇಳಬೇಕು ಎಂದು ಉತ್ತರಿಸಿದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡುವುದಾಗಿ ಹೇಳಿದ್ದಾರೆ. ಅದನ್ನು ಮುಂದುವರಿಸುತ್ತಾರೆ ಎಂದು ವಿವರಿಸಿದರು.