ಕರ್ನಾಟಕ

karnataka

ETV Bharat / state

ಮಂಡ್ಯ ಜನ ಒಂದು ಸಾರಿ ಕೆರಳಿದ್ರೆ ಅತಿರೇಕಕ್ಕೆ ಹೋಗ್ತಾರೆ : ರಾಕ್​ಲೈನ್​ಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ತಿರುಗೇಟು - ರಾಕ್​ಲೈನ್​ಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ತಿರುಗೇಟು

ಸಿನಿಮಾ ಮಾಡಿ ಹಣ ಸಂಪಾದಿಸಿರುವುದು ನಾವಲ್ಲ. ನಮ್ಮ ಆಸ್ತಿ ಪಾಸ್ತಿಯನ್ನು ಸಾರ್ವಜನಿಕ ಬದುಕಿಗೆ ಕೊಟ್ಟು ರಾಜಕಾರಣ ಮಾಡಿರುವುದು ನಾವು. ನಿಮಗೆ ನೀವೇ ಸೂಪರ್ ಪವರ್ ಎಂದು ಭಾವಿಸಬೇಡಿ. ಅಂಬರೀಶ್‌ ಅವರನ್ನು ಸಹ ಜನ ಸೋಲಿಸಿದ್ದಾರೆ. ಆವೇಶಕ್ಕೊಳಗಾದಾಗ ಇಂತಹ ಮಾತುಗಳು ನಮ್ಮ ನಾಯಕರಿಂದ ಬಂದಿದೆ..

Ravindra Srikanthaiah
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ

By

Published : Jul 10, 2021, 7:54 PM IST

ಮಂಡ್ಯ: ರವೀಂದ್ರ ಶ್ರೀಕಂಠಯ್ಯನವರು ಅಂಬಿ ಇದ್ದಾಗ ಮುಂಗಾರು ಮಳೆ ಗಣೇಶ್ ರೀತಿ ಇದ್ರು, ಈಗ ವಜ್ರಮುನಿ ತರ ಆಗಿದ್ದಾರೆ ಎಂಬ ರಾಕ್‌ಲೈನ್ ವೆಂಕಟೇಶ್ ಹೇಳಿಕೆಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ತಿರುಗೇಟು ನೀಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿಚಾರದಲ್ಲಿ ನೀವು ವಜ್ರಮುನಿ ಅವರನ್ನು ಯಾವ ರೀತಿ ಬಿಂಬಿಸಲು ಹೊರಟಿದ್ದೀರಾ.. ವಜ್ರಮುನಿ ಅಂದ್ರೇ ಸಿನಿಮಾದವರು ಅಂತೀರಾ.. ಸಿನಿಮಾದವರನ್ನೇ ಅಗೌರವವಾಗಿ ನಡೆಸಿಕೊಳ್ಳುತ್ತೀರಾ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ವಿಚಾರ.. ಸಿಎಂ, ಸಚಿವರ ಭೇಟಿ ನಂತರ ವಿವರ ತಿಳಿಸುತ್ತೇನೆ.. ಸಂಸದೆ ಸುಮಲತಾ ಅಂಬರೀಶ್

ನಟ-ನಟಿಯರಿಗೆ ವಜ್ರಮುನಿ ಅವರು ಗೌರವ ಕೊಡುತ್ತಿದ್ರು, ಅಂತಹ ನಟನ ಹೆಸರನ್ನು ಯಾವ ಯಾವ ಕಾರಣಕ್ಕೋ ಬಳಬೇಡಿ, ಹೀಗೆ ಮಾತಾಡುವುದರಿಂದಲೇ ಮನೆ ಮುಂದೆ ಜನ ಸೇರಿಸಿಕೊಳ್ತೀರಿ ಎಂದು ವ್ಯಂಗ್ಯವಾಡಿದರು. ಮಂಡ್ಯದ ಜನ ಬಹಳ ಶಾಂತವಾಗಿರ್ತಾರೆ. ಒಂದ್ ಸಲ‌ ಕೆರಳಿದ್ರೆ ಬಹಳ‌ ಅತಿರೇಕಕ್ಕೆ ಹೋಗ್ತಾರೆ. ಹೀಗಾಗಿ, ನಿಮ್ಮ ಇತಿಮಿತಿಯನ್ನು ಅರ್ಥೈಸಿಕೊಳ್ಳಿ‌ ಎಂದು ಸಲಹೆ ನೀಡಿದರು‌.

ರಾಕ್​ಲೈನ್ ನನಗೆ ಹೊಸಬರಲ್ಲ :ರಾಕ್‌ಲೈನ್ ವೆಂಕಟೇಶ್ ನನಗೇನು ಹೊಸಬರಲ್ಲ. ಹಿಂದೆ ಮಂಡ್ಯ ಕೊಪ್ಪಲು ಗ್ರಾಮಕ್ಕೆ ಶೂಟಿಂಗ್‌ಗೆ ಬಂದ ವೇಳೆ ಶರತ್ ಕುಮಾರ್ ದುರಂಹಕಾರಕ್ಕೆ ವಾಚ್, ಲ್ಯಾಪ್‌ಟಾಪ್ ಕಿತ್ತಾಕಿದ್ರು. ಅದಾದ ಬಳಿಕ ಇದೇ ರಾಕ್‌ಲೈನ್, ಅಂಬರೀಶ್ ಗಲಾಟೆ ತಣ್ಣಗೆ ಮಾಡುವಂತೆ ಹೇಳಿದ್ರು. ಮಯೂರ ರಿವ್ಯೂ ಹೋಟೆಲ್‌ನಲ್ಲಿ ಒಂದು ಗುಟ್ಟು ಹೇಳಿದ್ರು. ಆದ್ರೆ, ನಾನು ಆ ಗುಟ್ಟನ್ನು ಬಹಿರಂಗ ಪಡಿಸಲ್ಲ. ಯಾಕಂದ್ರೆ, ಸ್ವಲ್ಪ ಮಟ್ಟಿಗೆ ನಿಮ್ಮನ್ನು ಸ್ನೇಹಿತ ಅಂತ ಮನಸ್ಸಿನಲ್ಲಿಟ್ಟುಕೊಂಡಿದ್ದೀನಿ ಎಂದು ರಾಕ್‌ಲೈನ್ ವೆಂಕಟೇಶ್ ವಿರುದ್ಧ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ

ಸಿನಿಮಾ ಮಾಡಿ ಹಣ ಸಂಪಾದಿಸಿರುವುದು ನಾವಲ್ಲ. ನಮ್ಮ ಆಸ್ತಿ ಪಾಸ್ತಿಯನ್ನು ಸಾರ್ವಜನಿಕ ಬದುಕಿಗೆ ಕೊಟ್ಟು ರಾಜಕಾರಣ ಮಾಡಿರುವುದು ನಾವು. ನಿಮಗೆ ನೀವೇ ಸೂಪರ್ ಪವರ್ ಎಂದು ಭಾವಿಸಬೇಡಿ. ಅಂಬರೀಶ್‌ ಅವರನ್ನು ಸಹ ಜನ ಸೋಲಿಸಿದ್ದಾರೆ. ಆವೇಶಕ್ಕೊಳಗಾದಾಗ ಇಂತಹ ಮಾತುಗಳು ನಮ್ಮ ನಾಯಕರಿಂದ ಬಂದಿದೆ ಎಂದರು.

ಇದನ್ನೂ ಓದಿ: ಕಾಂಟ್ರೋವರ್ಸಿ ಇಷ್ಟವಿಲ್ಲ, ವಿವಾದಕ್ಕೆ ಅವರೇ ಅಂತ್ಯವಾಡಿದ್ರೆ ನಂಗೆ ಸಂತೋಷ : ಸಂಸದೆ ಸುಮಲತಾ ಅಂಬಿ

ಡ್ಯಾಂ ಪರಿಶೀಲಿಸಿ, ಜನರ ಬಳಿ ಕ್ಷಮೆ ಕೇಳಿ : KRSಗೆ ಒಮ್ಮೆ ಬಂದು ಪರಿಶೀಲನೆ ಮಾಡಿ. ತಜ್ಞರೇ ಡ್ಯಾಂ ಸುರಕ್ಷಿತ ಎಂಬ ವರದಿ ಕೊಟ್ಟಿದ್ದಾರೆ. ಡ್ಯಾಂ ಪರಿಶೀಲಿಸಿ ಜನರ ಬಳಿ ಕ್ಷಮೆ ಕೇಳಿ. ಒಂದು ಗಣಿಗಾರಿಕೆ ನಿಲ್ಲಿಸಿ ನೋಡಿ ಜನ ಬೀದಿಗೆ ಬರುತ್ತಾರೆ. ಈಗಲೇ ಜಲ್ಲಿ, ಕಲ್ಲು ಸಿಗುತ್ತಿಲ್ಲ. ಅಕ್ರಮ ಇದ್ದರೆ ಸರ್ಕಾರ ಮಟ್ಟದಲ್ಲಿ ತೀರ್ಮಾನ ಮಾಡಿ ಕ್ರಮಕೈಗೊಳ್ಳಲಿ ಎಂದು ಸಲಹೆ ನೀಡಿದರು.

ನಿಮ್ಮನ್ನ ನಟೋರಿಯಸ್ ಎನ್ನದೇ ಇನ್ನೇನು ಹೇಳಬೇಕು :KRS ಬಿರುಕು ಬಿಟ್ಟಿದೆ ಎಂದು ರಾಜ್ಯದಲ್ಲಿ ಅಶಾಂತಿ ಮೂಡಿಸಿದ ನಿಮ್ಮನ್ನು ನಟೋರಿಯಸ್ ಎನ್ನದೇ ಇನ್ನೇನು ಹೇಳಬೇಕು. ಸಾಮಾನ್ಯ ಜನ ಈ ಹೇಳಿಕೆ ನೀಡಿದ್ರೆ ಇಷ್ಟೊತ್ತಿಗೆ ಕೇಸ್ ಹಾಕಿರೋರು. ಆದ್ರೆ, ಇವರ ವಿರುದ್ಧ ಕ್ರಮ ಯಾಕೆ ತೆಗೆದುಕೊಂಡಿಲ್ಲ. ನಾನು ಇವರನ್ನು ಬಂಧಿಸಿ ಎನ್ನಲ್ಲ, ಯಾಕಂದ್ರೆ, ನನ್ನನ್ನ ಸಹೋದರ ಎಂದಿದ್ದಾರೆ ಎಂದು ತಿಳಿಸಿದರು.

ABOUT THE AUTHOR

...view details