ಕರ್ನಾಟಕ

karnataka

ETV Bharat / state

ಸಿಎಂ ಬಾಗಿನ ಅರ್ಪಣೆ ಕಾರ್ಯಕ್ರಮದ ತಳಿರು ತೋರಣಕ್ಕೆ 13 ಲಕ್ಷ ರೂ. ಖರ್ಚು: ರವೀಂದ್ರ ಶ್ರೀಕಂಠಯ್ಯ ಆರೋಪ - ಸಿಎಂ ಯಡಿಯೂರಪ್ಪ ಕಾವೇರಿಗೆ ಬಾಗೀನ ಅರ್ಪಣೆ ಕಾರ್ಯಕ್ರಮ

ಸಿಎಂ ಯಡಿಯೂರಪ್ಪ ಕಾವೇರಿಗೆ ಬಾಗಿನ ಅರ್ಪಣೆ ಕಾರ್ಯಕ್ರಮದ ತಳಿರು ತೋರಣಕ್ಕೆ 13 ಲಕ್ಷ ರೂಪಾಯಿ ಖರ್ಚಾಗಿರುವುದಾಗಿ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದ್ದಾರೆ.

Ravindra Srikantaiah
ಶಾಸಕ ರವೀಂದ್ರ ಶ್ರೀಕಂಠಯ್ಯ

By

Published : Aug 23, 2020, 6:02 PM IST

ಮಂಡ್ಯ:ಗೌರಿ ಹಬ್ಬದ ದಿನ ಸಿಎಂ ಯಡಿಯೂರಪ್ಪ ಕಾವೇರಿಗೆ ಬಾಗಿನ ಅರ್ಪಣೆ ಕಾರ್ಯಕ್ರಮದ ತಳಿರು ತೋರಣಕ್ಕೆ ಖರ್ಚಾಗಿರುವ ಹಣ 13 ಲಕ್ಷ ರೂಪಾಯಿ ಅಂತೆ. ಹೀಗಂತ ಜೆಡಿಎಸ್ ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದ್ದಾರೆ.

ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಈ ಕುರಿತಂತೆ ಗಂಭೀರ ಆರೋಪ ಮಾಡಿದ್ದು, ಜಿಲ್ಲಾಡಳಿತದಿಂದ ಬಾಗಿನಕ್ಕೆ 13 ಲಕ್ಷ ಖರ್ಚಾಗಿರುವ ಲೆಕ್ಕ ತೋರಿಸಿದ್ದಾರೆ ಎಂದು ಕಾರ್ಯಕ್ರಮವೊಂದರಲ್ಲಿ ಭ್ರಷ್ಟಾಚಾರದ ಆರೋಪ ಮಾಡಿದರು.

ಮಾವಿನ ತೋರಣ ಮತ್ತು ಬಾಳೆ ಕಂದು ಕಟ್ಟೋಕೆ 13 ಲಕ್ಷ ರೋಪಾಯಿ ಬೇಕಾ ಎಂದು ಪ್ರಶ್ನೆ ಮಾಡಿದ್ದು, ಇಷ್ಟು ವರ್ಷ ನಾವು ಮಾಡಿಲ್ವ, ಅಲ್ಲಿ ಬಾಗೀನ ಬಿಟ್ಟಿಲ್ವವೆಂದು ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸಿದರು.

ABOUT THE AUTHOR

...view details