ಮಂಡ್ಯ:ಮಳವಳ್ಳಿಯಲ್ಲಿ ಟ್ಯೂಷನ್ಗೆ ತೆರಳಿದ್ದ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರಗೈದು ಕೊಲೆ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ಅಂತಹದ್ದೇ ಪ್ರಕರಣ ಜಿಲ್ಲೆಯ ಹಲಗೂರಿನ ಸಮೀಪವಿರುವ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ವೃದ್ಧವೊಬ್ಬ ಅಪ್ರಾಪ್ತ ಬಾಲಕಿಗೆ ಊಟ, ತಿಂಡಿಯ ಆಮಿಷ ತೋರಿಸಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.
ಸಮೀಪದ ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮವೊಂದರ 63 ವರ್ಷದ ವೃದ್ಧ ಪ್ರಕರಣದ ಆರೋಪಿ. ಈತ ಅದೇ ಗ್ರಾಮದ 15 ವರ್ಷದ ಬಾಲಕಿಗೆ ತಿಂಡಿ ಕೊಡಿಸುವುದಾಗಿ ಹಲಗೂರಿಗೆ ಕರೆದೊಯ್ದಿದ್ದಾನೆ. ಊಟ ಕೊಡಿಸಿದ ನಂತರ ಬಸವನಹಳ್ಳಿಗೆ ಕರೆದುಕೊಂಡು ಹೋಗಿ, ಬಾಲಕಿ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ ಎಂದು ದೂರು ನೀಡಲಾಗಿದೆ.